ದೇಶದ ವೈವಿಧ್ಯಮಯ ಚಿನ್ನಾಭರಣಗಳ ಮಾರಾಟಕ್ಕೆ ಮೈಸೂರಿನಲ್ಲಿ ಚಾಲನೆ

The Jewellery Show
Published on

ಮೈಸೂರು: ಮದುವೆ ಮತ್ತು ದಸರಾ ಹಬ್ಬ ಹಾಗೂ ಶುಭಕಾರ್ಯಗಳಿಗೆ ಮೆರಗು ನೀಡಲು ನಗರದ ರ‌್ಯಾಡಿಸನ್ ಬ್ಲೂ ಪ್ಲಾಜಾ ಹೋಟೆಲ್‌ನಲ್ಲಿ ಹಮ್ಮಿಕೊಂಡಿರುವ ವಿನೂತನ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶನಿವಾರ ಚಾಲನೆ ದೊರೆಯಿತು. ಈ ಮೇಳ ಸೆ.5 ರವರೆಗೆ ನಡೆಯಲಿದೆ.

ಮೇಳಕ್ಕೆ ಚಾಲನೆ ನೀಡಿದ ನಟಿ ಧನ್ಯ ರಾಮ್‌ಕುಮಾರ್ ಮಾತನಾಡಿ, ಗ್ರಾಹಕರ ಬೇಡಿಕೆ ಹಿನ್ನೆಲೆಯಲ್ಲಿ ಒಂದೇ ವರ್ಷದಲ್ಲಿ ಎರಡನೇ ಬಾರಿಗೆ ನಗರದಲ್ಲಿ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಬಿ.ಎನ್. ಜಗದೀಶ್ ಮತ್ತು ಹೇಮಲತಾ ಜಗದೀಶ್ ಆಯೊ ೀಜಿಸಿರುವುದು ಸಂತಸದ ವಿಚಾರ. ಮೇಳದಲ್ಲಿ ಸಾಂಪ್ರದಾಯಿಕ ಆಭರಣಗಳು, ದಿನನಿತ್ಯ ಬಳಕೆ ಮಾಡುವ ಆಭರಣಗಳು, ವಜ್ರಾಭರಣ ಗಳು ಸೇರಿದಂತೆ ಹಲವು ಬಗೆಯ ಆಭರಣಗಳು ಒಂದೇ ಸೂರಿನಡಿ ದೊರೆಯುತ್ತಿರುವುದು ಮೈಸೂರಿಗರ ಪಾಲಿಗೊಂದು ಸುವರ್ಣಾ ವಕಾಶ. ದೇಶದ ವಿವಿಧ ಆಭರಣ ತಯಾರಕರು, ಆಭರಣ ಮಳಿಗೆಯವರು ತಯಾರಿಸಿದ ವೈವಿಧ್ಯಮಯ ಆಭರಣಗಳನ್ನು ಖರೀದಿ ಸಬಹುದು ಎಂದರು.

ಮೇಳದ ಆಕರ್ಷಣೆ ಏನು?:
ಮೇಳದಲ್ಲಿ ದೇಶದ 20 ಅಗ್ರ ಶ್ರೇಣಿಯ ಆಭರಣ ತಯಾರಕರು, ಪ್ರಶಸ್ತಿ ವಿಜೇತ ಹಾಗೂ ಹೆಸರಾಂತ ಆಭರಣ ಮಳಿಗೆಯವರು ಭಾಗವಹಿಸಿದ್ದಾರೆ. ಮದುವೆ ಸಮಾರಂಭ ಹಾಗೂ ದಸರಾ ಹಬ್ಬದ ಶುಭ ಸಂದರ್ಭದಲ್ಲಿ ಆಭರಣಗಳನ್ನು ಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ.

ಎಲ್ಲ ಚಿನ್ನದ ಆಭರಣಗಳು ಬಿಐಎಸ್ ಹಾಲ್ ಮಾರ್ಕ್ ಹೊಂದಿರುತ್ತವೆ. ಅಂತಾರಾಷ್ಟ್ರೀಯ ಗುಣಮಟ್ಟದ ಜಿಐಎ/ಐಜಿಐ ಪ್ರಮಾಣಿತ ವಜ್ರಾಭರಣಗಳು ಮಾರಾಟಕ್ಕೆ ಲಭ್ಯವಿದೆ. ಖರೀದಿದಾರರಿಗೆ ಹಳೇ ಚಿನ್ನವನ್ನು ಬದಲಾಯಿಸಿಕ್ಕೊಳ್ಳುವ ಅವಕಾಶ ಕಲ್ಪಿಸಲಾ ಗಿದೆ. ಮೇಳದ ನಂತರವೂ ಗ್ರಾಹಕರಿಗೆ ಆಭರಣಗಳಿಗೆ ಸಂಬಂಧಿಸಿದ ಸೇವೆ ದೊರೆಯಲಿದೆ. ಮೈಸೂರಿನ ಸುತ್ತಮುತ್ತಲಿನ ಜನರ ಅಭಿರುಚಿ ಅರಿತು ಅವರ ಇಚ್ಛೆಗನುಗುಣವಾಗಿ ಆಭರಣಗಳನ್ನು ತಯಾರಿಸಲಾಗಿದೆ. ಗ್ರಾಹಕರ ಅಭಿರುಚಿ ಮತ್ತು ಬಜೆಟ್‌ಗೆ ಅನುಗುಣವಾಗಿ ಚಿನ್ನ ಮತ್ತು ವಜ್ರದ ಆಭರಣಗಳು ದೊರೆಯಲಿದೆ. ಪ್ರತಿ ದಿನ ಬೆಳಗ್ಗೆ 10 ರಿಂದ ರಾತ್ರಿ 8ರವರೆಗೆ ಪ್ರರ್ದನ ಮತ್ತು ಮಾರಾಟ ನಡೆಯಲಿದೆ.

ಈ ಸಂದರ್ಭ ಆಯೋಜಕರಾದ ಬಿ.ಎನ್. ಜಗದೀಶ್ ಮತ್ತು ಹೇಮಲತಾ ಜಗದೀಶ್, ಇಂಟೀರಿಯರ್ ಡಿಸೈನರ್ ಚೈತ್ರಾ ರಂಗಸ್ವಾಮಿ, ಉದ್ಯಮಿ ಪಲ್ಲವಿ ಸಿ.ಟಿ. ರವಿ, ಹೃದ್ರೋಗ ತಜ್ಞೆ ಡಾ. ಹೇಮಾ ರವೀಶ್, ಉದ್ಯಮಿ ಅಂಕಿತಾ ವಿನಾಯಕ್ ಕಿಣಿ, ಮಕ್ಕಳ ತಜ್ಞೆ ಡಾ. ವಿ. ದೀಪಾಲಿ, ಮಿಸಸ್ ಇಂಡಿಯಾ ಯೂನಿವರ್ಸ್ ಡಾ.ಹೇಮಾಮಾಲಿನಿ ಲಕ್ಷ್ಮಣ್, ಉದ್ಯಮಿಗಳಾದ ಮಮತಾ ರಾವ್, ಸುರೇಖಾ ಕಾಮತ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net