

ವಿಜಯಪುರ : ಇಲ್ಲಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಹಾನಗರ ಟಕದಿಂದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ ಜಯಂತಿ ಆಚರಿಸಲಾಯಿತು.
ಮಹಾನಗರ ಟಕ ಅಧ್ಯಕ್ಷೆ ಸುಮಾ ಬೋಳರೆಡ್ಡಿ ಮಾತನಾಡಿ, ಬಾಬಾಸಾಹೇಬ ಅಂಬೇಡ್ಕರ್ 2 ವರ್ಷದ ಬಾಲಕನಿದ್ದಾಗ ತಂದೆ ನೌಕರಿಯಿಂದ ನಿವೃತ್ತಿ ಹೊಂದಿದರು. ಅಂಬೇಡ್ಕರ್ ಅವರು ಭಾರತದ ನೀರಾವರಿ ಯೋಜನೆಯ ಜನಕನಾಗಿದ್ದು, ಉತ್ತರ ಭಾರತ ಮತ್ತು ದಣ ಭಾರತ ನದಿಗಳ ಜೋಡಣೆಗೆ 1952 ರಲ್ಲಿ ಸಲಹೆ ನೀಡಿದರು. ನೆಹರು ಅವರು ವಿದೇಶಿ ಗಣ್ಯರಿಗೆ ಇವರನ್ನು ಪರಿಚಯಿಸುವಾಗ ಅಂಬೇಡ್ಕರ್ ಅವರು ನನ್ನ ಮಂತ್ರಿ ಮಂಡಲದ ವಜ್ರವಾಗಿದ್ದಾರೆ ಎಂದು ಪರಿಚಯಿಸುತ್ತಿದ್ದರು ಎಂದು ಹೇಳಿದರು.
ಎಬಿವಿಪಿ ಪದಾಧಿಕಾರಿಗಳಾದ ಐಶ್ವರ್ಯ ಆಸಂಗಿ, ಸ್ನೇಹಾ ಹಿರೇಮಠ, ಸಂದೀಪ ಅರಳಗುಂಡಿ, ಚೇತನ ಕೊರವಾರ, ಅಭಿಷೇಕ ಬಡಿಗೇರ, ಪ್ರದಿಪ ಬಿ.ಎಡ್. ರಾಜೇಂದ್ರ ಕಸ್ಕಿದಾನಮ್ಮ ಹೊಸಮನಿ, ಅಶ್ವಿನಿ ಜಾಧವ ಮತ್ತಿತ್ತರಿದ್ದರು.