

ಹುಬ್ಬಳ್ಳಿ: ನಗರದ ಗೋಕುಲ ರಸ್ತೆ ಡೆನಿಸನ್ಸ್ ಹೋಟೆಲ್ ನಲ್ಲಿ ದೇಶದ 30 ಅಗ್ರಶ್ರೇಣಿಯ ಆಭರಣ ತಯಾರಕರಿಂದ ಮೂರು ದಿನಗಳ ಕಾಲ ನಡೆಯುವ ದಿ ಜುವೆಲರಿ ಶೋ, ವಿನೂತನ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಒಂದೇ ಸೂರಿನಡಿ 30 ಸಾವಿರಕ್ಕೂ ಅಧಿಕ ಡಿಸೈನಿನ ಆಭರಣಗಳಿರುವ ಪ್ರದರ್ಶನವನ್ನು ನಟ ನೆನಪಿರಲಿ ಪ್ರೇಮ್ ಹಾಗೂ ಅವರ ಪುತ್ರಿ ಅಮೃತಾ ಪ್ರೇಮ್ ಅವರು ಉದ್ಘಾಟಿಸಿದರು.
ಮೇಳ ಆಯೋಜಕರಾದ ಗೋಲ್ಡನ್ ಕ್ರೀಪರ್ ಸಂಸ್ಥೆಯ ಜಗದೀಶ ಬಿ.ಎನ್, ಹೇಮಲತಾ ಜಗದೀಶ, ಪಾಲಿಕೆ ಸದಸ್ಯರಾದ ಪ್ರೀತಿ ಲದವಾ, ಸುನಿತಾ ಬುರಬುರೆ, ಸರಸ್ವತಿ ಧೋಂಗಡಿ, ಪ್ರಮುಖರಾದ ಸ್ನೇಹಾ ಪ್ರದಿಪ ಶೆಟ್ಟರ್, ಸವಿತಾ ಅಮರಶೆಟ್ಟಿ, ಡಾ. ಅನಿತಾ ಪಾಟೀಲ್ ಇತರರು ಉಪಸ್ಥಿತರಿದ್ದರು.