ಜೆಡಿಎಸ್ ಪಕ್ಷದವರು ಒಂದು ರೀತಿ ಬಿಜೆಪಿಯ ಪ್ರಣಾಳಿಕೆಯಂತೆ

Venkatesh H.A
Published on

ಮೈಸೂರು: ಕಾವೇರಿ ನದಿ ವಿಚಾರವನ್ನು ಕುರಿತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನೀಡಿರುವ ಹೇಳಿಕೆ ಬಹಳ ಬಾಲೀಶವಾಗಿದೆ. ಅವರೇ ಪ್ರಧಾನಿಯಾಗಿದ್ದ ಸಮಯದಲ್ಲಿ ಈ ಸಮಸ್ಯೆಯನ್ನು ಪರಿಹಾರ ಮಾಡಬಹುದಾಗಿತ್ತು. ಆದರೆ ಅವರು ಹಾಗೇ ಮಾಡದೇ ಈಗ ವಿಚಾರವನ್ನು ಭಾವನಾತ್ಮಕವಾಗಿ ಪ್ರಸ್ತಾಪಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಟೀಕಿಸಿದರು.

ಜೆಡಿಎಸ್ ನಾಯಕರಿಗೆ ಕಾವೇರಿ ಸಮಸ್ಯೆಯನ್ನು ಜೀವಂತವಾಗಿ ಇರಬೇಕು ಎನ್ನುವುದು ಅವರ ದೃಷ್ಟಿಕೋನವಾಗಿದೆ. ಜನರು ಇಂತಹ ವಿಚಾರಗಳನ್ನು ಕೇಳಿ-ಕೇಳಿ ಬೇಜಾರಾಗಿದ್ದೂ, ನಿಮ್ಮ ವಿರುದ್ಧ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜೆಡಿಎಸ್ ಪಕ್ಷದವರು ಒಂದು ರೀತಿ ಬಿಜೆಪಿಯ ಪ್ರಣಾಳಿಕೆಯಂತೆ. ಏಕೆಂದರೆ ಬಿಜೆಪಿಯು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವುದನ್ನೂ ಅನುಷ್ಠಾನಕ್ಕೆ ತರುವುದೇ ಇಲ್ಲ. ಅದೇ ರೀತಿ ಜೆಡಿಎಸ್‌ನವರು ಬರೀ ಸುಳ್ಳುಗಳನ್ನೇ ಹೇಳುತ್ತಾರೆ. ಲೋಕಾಸಭಾ ಚುನಾವಣೆಯ ನಂತರವೂ ಮೈತ್ರಿ ಮುಂದುವರೆಯುತ್ತದೆ ಎಂದು ಜೆಡಿಎಸ್‌ನವರು ಹೇಳಿಕೆ ಕೊಟ್ಟಿದ್ದಾರೆ. ಮೈತ್ರಿ ಮುಂದುವರೆಯುತ್ತದೋ ಅಥವಾ ವಿಲಿನವಾಗುತ್ತಾರೋ ಎನ್ನುವುದು ಆ ಪಕ್ಷಗಳ ಮುಖಂಡರೇ ನೋಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net