ಮತ್ತೆ ಗರ್ಜಿಸಿದ ಜೆಸಿಬಿಗಳು

15 K.L.R. 01
Published on

ಅರಣ್ಯ ಇಲಾಖೆಯಿಂದ ಒತ್ತುವರಿ ತೆರವು ಕಾರ್ಯಾಚರಣೆ

ಶ್ರೀನಿವಾಸಪುರ: ಜಿಲ್ಲೆಯಲ್ಲಿ ಅರಣ್ಯಭೂಮಿ ಒತ್ತುವರಿ ತೆರವು ಕಾರ್ಯಾಚರಣೆಗೆ ಅರಣ್ಯ ಇಲಾಖೆ ಮತ್ತೆ ಚಾಲನೆ ನೀಡಿದೆ.

ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಹೋಬಳಿಯ ಕೊಟ್ಲೆವಾರಿಪಲ್ಲಿ ಸುತ್ತಮುತ್ತ ಅರಣ್ಯ ಇಲಾಖೆ ವ್ಯಾಪ್ತಿಯ

350ಕ್ಕೂ ಹೆಚ್ಚು ಎಕರೆ ಗುರುತಿಸಲಾಗಿದ್ದು, ಬುಧವಾರ 110 ಎಕರೆಯನ್ನು ಜೆಸಿಬಿ ಮೂಲಕ ತೆರವು ಮಾಡಿ ಇಲಾಖೆ ವಶಕ್ಕೆ ಪಡೆಯಲಾಯಿತು.

ಜಿಲ್ಲೆಯಾದ್ಯಂತ ಅರಣ್ಯ ಇಲಾಖೆ ಇದುವರೆಗೂ 3,000ಕ್ಕೂ ಹೆಚ್ಚು ಎಕರೆ ಒತ್ತುವರಿ ತೆರವು ಮಾಡಿದೆ. ಬುಧವಾರ ತೆರವು ಮಾಡಿದ ಭೂಮಿಯಲ್ಲಿ ರೈತರು ಮಾವು, ತರಕಾರಿ ಬೆಳೆದಿದ್ದರು. ಜತೆಗೆ ಕೋಳಿಫಾಮ್​ರ್, ಇಟ್ಟಿಗೆ ್ಯಾಕ್ಟರಿ ಮುಂತಾದ ವಾಣಿಜ್ಯ ಸಂಬಂಧಿತ ಶೆಡ್​ಗಳನ್ನು ನಿರ್ಮಿಸಿದ್ದರು.

ಈ ಹಿಂದೆಯೇ ತೆರವು ಕಾರ್ಯಾಚರಣೆಗೆ ಅರಣ್ಯ ಇಲಾಖೆ ಮುಂದಾದಾಗ ರೈತರು ಮತ್ತು ಅರಣ್ಯ ಸಿಬ್ಬಂದಿ ಮಧ್ಯೆ ರ್ಷಣೆ ಉಂಟಾಗಿ ಪ್ರಕರಣ ಕೋರ್ಟ್​ ಮೆಟ್ಟಿಲೇರಿತ್ತು. ಕೆಲವರು ನ್ಯಾಯಾಲಯದಿಂದ ತಾತ್ಕಾಲಿಕ ತಡೆಯಾೆ ತಂದಿದ್ದರು.ಸದ್ಯ ಇಂತಹ ಭೂಮಿಯನ್ನು ಬಿಟ್ಟು ಉಳಿದ ಒತ್ತುವರಿ ತೆರವು ಮಾಡಲು ಇಲಾಖೆ ಕ್ರಮಕೈಗೊಂಡಿದೆ. ಸದರಿ ಜಾಗದಲ್ಲಿ 60ರಿಂದ 70 ರೈತರು ಮಾವು, ತರಕಾರಿ ಬೆಳೆದಿದ್ದರು. ಬೆಳ್ಳಂಬೆಳಿಗ್ಗೆ ಜೆಸಿಬಿಗಳು ಆರ್ಭಟ ಕೇಳಿ ರೈತರು ಕಂಗಾಲಾಗಿ ಫಸಲು ಕಾಪಾಡಿಕೊಳ್ಳಲು ಅರಣ್ಯ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜವಾಗಲಿಲ್ಲ. ತೆರವು ಮಾಡಿ ಸುತ್ತಲೂ ೆನ್ಸಿಂಗ್​ ಕಾರ್ಯ ಮುಂದುವರಿಸಲಾಯಿತು.

ಈ ಹಿಂದೆ ಇದ್ದ ಜಿಲ್ಲಾ ಅರಣ್ಯಾಧಿಕಾರಿ ಏಡುಕೊಂಡಲ ಅವರ ಅವಧಿಯಲ್ಲಿ 2,000ಕ್ಕೂ ಹೆಚ್ಚು ಎಕರೆ ಜಮೀನನ್ನು ವಶಪಡಿಸಿಕೊಳ್ಳಲಾಗಿತ್ತು. ಏಡುಕೊಂಡಲ ಅವರು ರಾಜಕೀಯ ವ್ಯಕ್ತಿಗಳ ಕೆಂಗೆಣ್ಣಿಗೆ ಗುರಿಯಾಗಿ ವರ್ಗಾವಣೆ ಮಾಡಲಾಯಿತು. ಅವರ ಸ್ಥಳಕ್ಕೆ ಬಂದ ಸರಿನಾ ಸಿಕ್ಕಲಿಗರ್​ ಬಂದ ನಂತರ 800ಕ್ಕೂ ಹೆಚ್ಚು ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ.

ಜಿಲ್ಲೆಯಲ್ಲಿ 8,000ಕ್ಕೂ ಹೆಚ್ಚು ಎಕರೆ ಅರಣ್ಯಭೂಮಿ ಒತ್ತುವರಿಯಾಗಿದೆ. ಹಂತ&ಹಂತವಾಗಿ ತೆರವು ಮಾಡಲಾಗುವುದು. ಕೆಲವು ಕಡೆ ನ್ಯಾಯಾಲಯದಲ್ಲಿ ತಡೆ ತಂದಿದ್ದಾರೆ. ಭೂಮಿಗೆ ಸಂಬಂಧಪಟ್ಟ ಮೂಲ ದಾಖಲೆಗಳು ಲಭ್ಯವಿದೆ. ತಾತ್ಕಾಲಿಕವಾಗಿ ಒತ್ತುವರಿದಾರರು ತಡೆಯಾೆ ತಂದಿರಬಹುದು ಆದರೆ, ಯಾವುದೇ ಕಾರಣಕ್ಕೂ ಭೂಮಿ ಉಳಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಸ್ವಂತಕ್ಕಾಗಿ ಹೋರಾಟ ಮಾಡುತ್ತಿಲ್ಲ, ಇಲಾಖೆಗೆ ಸೇರಿದ ಜಾಗ ಉಳಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. | ಸರಿನಾ ಸಿಕ್ಕಲಿಗರ್​, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕೊಟ್ಲೆವಾರಿಪಲ್ಲಿ ಗ್ರಾಮದ ಸುಮಾರು ರೈತರು ಸುಮಾರು ವರ್ಷಗಳಿಂದ ಕೊಳವೆ ಬಾವಿ ಕೊರೆಸಿಕೊಂಡು ತೋಟಗಾರಿಕಾ ಬೆಳೆ ಮಾಡುತ್ತಿದ್ದಾರೆ. ಸಾಗುವಳಿಗಾಗಿ ಅರ್ಜಿ ಹಾಕಿಕೊಂಡಿದ್ದಾರೆ. ಸದರಿ ಜಾಗ ಗೋಮಾಳವಾಗಿದ್ದು, 2021ರಲ್ಲಿ ಕಂದಾಯ ಇಲಾಖೆ ಅರಣ್ಯ ಇಲಾಖೆಯ ವಶಕ್ಕೆ ನೀಡಿದೆ. ರೈತರು ಸಾಗುವಳಿಗಾಗಿ ಅರ್ಜಿ ಹಾಕಿಕೊಂಡಿದ್ದರೂ ಕಂದಾಯ ಇಲಾಖೆ ರ್ನಿಲಕ್ಷ$್ಯದಿಂದ ಜಮೀನನ್ನು ಅರಣ್ಯ ಇಲಾಖೆ ವಶಕ್ಕೆ ನೀಡಿರುವುದರಿಂದ ಅದರಲ್ಲಿರುವ ಸುಮಾರು ರೈತರನ್ನು ವಕ್ಕಲೆಬ್ಬಿಸುವ ಕೆಲಸ ಮಾಡಲಾಗುತ್ತಿದೆ. ಬಡವರ ಜಮೀನನ್ನು ಬಡವರಿಗೆ ಉಳಿಸುವ ಕೆಲಸ ಮಾಡಬೇಕಾಗಿದೆ. | ಪಾತಕೋಟೆ ನವೀನ್​, ರೈತ ಸಂದ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net