ಜನಿವಾರ ಪ್ರಕರಣ ಆತ್ಮಸ್ಥೆರ್ಯ ಕುಗ್ಗಿಸುವ ಪ್ರಯತ್ನ

The January incident is an attempt to undermine confidence.
ಮಲ್ಲಿಕಾರ್ಜುನ ಪತ್ತಾರ
Published on

ಕಲಾದಗಿ: ರಾಜ್ಯದ ವಿವಿಧೆಡೆಗಳಲ್ಲಿ ಸಿಇಟಿ ಪರೀಕ್ಷೆ ಬರೆಯಲು ಹೊರಟಿದ್ದ ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸಿರುವ ಪ್ರಕರಣವನ್ನು ವಿಶ್ವಕರ್ಮ ವಂಶೀ ಸೇನೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಪತ್ತಾರ, ಶಿರಸಂಗಿಯ ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷ ಪಿ.ಬಿ.ಬಡಿಗೇರ ಸೇರಿ ಸಂಘಟನೆಯ ಇನ್ನಿತರ ಪ್ರಮುಖರು ತೀವ್ರವಾಗಿ ಖಂಡಿಸಿದ್ದಾರೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿರುವ ಅವರು, ಇದೊಂದು ಜನಿವಾರಧಾರಿಗಳ ಆತ್ಮಸ್ಥೆರ್ಯ ಕುಗ್ಗಿಸುವ ಪ್ರಯತ್ನವಾಗಿದ್ದು, ಈ ಪ್ರಯತ್ನಕ್ಕೆ ನಾವೆಂದು ಕುಗ್ಗುವುದಿಲ್ಲ. ಅದನ್ನು ಬಲವಾಗಿ ಎದುರಿಸುವ ಶಕ್ತಿಯನ್ನು ನಾವೆಲ್ಲ ಹೊಂದಿದ್ದೇವೆ. ಇಂಥಹದೇ ಇನ್ಯಾವುದೇ ಷಡ್ಯಂತ್ರಗಳು ನಡೆದರೆ ಜನಿವಾರಧಾರಿಗಳ ಸಮಸ್ತ ಸಮಾಜದವರು ಇದನ್ನು ಮಾಡಿದವರಿಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಎಚ್ಚರಿಸಿದ್ದಾರೆ.

ಈ ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇನ್ನುಮುಂದೆ ಇಂಥಹ ಘಟನೆಗಳು ನಡೆಯದಂತೆ ಸೂಕ್ತ ಕಾನೂನು ಕ್ರಮಗಳನ್ನು ರೂಪಿಸಬೇಕು ಎಂದು ಸಂಘಟನೆಯ ಸ್ಥಳಿಯ ಪ್ರಮುಖರಾದ ರಾಮಚಂದ್ರ ಬಡಿಗೇರ, ಭದ್ರೂ ಶಿಲ್ಪಿ, ಮಲ್ಲಪ್ಪ ಬಡಿಗೇರ, ಪಲ್ಲಪ್ಪ ಬಡಿಗೇರ, ದೇವನಾಳದ ಮೌನೇಶ, ಕಿರಣ, ಈರಣ್ಣಾ, ಹನುಮಂತ, ದೇವೆಂದ್ರ ಮತ್ತಿತರರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net