ಜನಿವಾರಧಾರಿ ಸಮುದಾಯಕ್ಕೆ ಬೇಕಿದೆ ನ್ಯಾಯ

kota-3
Published on

ಕೋಟ: ರಾಜ್ಯದ ವಿವಿಧ ಕಡೆಗಳಲ್ಲಿ ಸಿ.ಇ.ಟಿ. ಪರೀಕ್ಷೆಗಾಗಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಕ್ರಮವನ್ನು ವಿರೋಧಿಸಿ ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ನೇತೃತ್ವದಲ್ಲಿ ಗೌಡ ಸಾರತ್ವತ ಬ್ರಾಹ್ಮಣ ಸಮಾಜ, ಕೋಟ ವಿರಾಡ್ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘ, ಗಾಣಿಗ ಯುವ ಸಂಘಟನೆ ಕೋಟ ವಲಯದ ಸಹಯೋಗದಲ್ಲಿ ಮಂಗಳವಾರ ಸಾಲಿಗ್ರಾಮದಲ್ಲಿ ಪ್ರತಿಭಟನೆ, ಸಭೆ ನಡೆಯಿತು.

ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯಾಧ್ಯಕ್ಷ ಶಿವರಾಮ ಉಡುಪ ಮಾತನಾಡಿ, ಈ ಹಿಂದೆ ಯಾವುದೇ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಉದಾಹರಣೆ ಇಲ್ಲ. ಜನಿವಾರಧಾರಿ ಸಮುದಾಯಕ್ಕೆ ನ್ಯಾಯಬೇಕು. ಇಂಥ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದರು.

ಕೋಟ ವಿರಾಡ್ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಮಣೂರು ಸುಬ್ರಾಯ ಆಚಾರ್ಯ, ಗಾಣಿಗ ಯುವ ಸಂಘಟನೆ ಕೋಟ ಘಟಕ ಅಧ್ಯಕ್ಷ ಗಿರೀಶ್ ಗಾಣಿಗ, ಕೂಟಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆಯ ಮಾಜಿ ಅಧ್ಯಕ್ಷ ಶ್ರೀಪತಿ ಅಧಿಕಾರಿ, ಗೌಡ ಸಾರತ್ವತ ಬ್ರಾಹ್ಮಣ ಸಮಾಜದ ಸಾಲಿಗ್ರಾಮ ವಲಯದ ವಿವೇಕ್ ಮೊದಲಾದವರು ಮಾತನಾಡಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪರವಾಗಿ ಉದಯ ನಾಯ್ಕ ಮನವಿ ಸ್ವೀಕರಿಸಿದರು.

ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ನಾಗರಾಜ ಗಾಣಿಗ, ಬ್ರಾಹ್ಮಣ ಸಮಾಜದ ಪ್ರಮುಖರಾದ ರಘು ಮಧ್ಯಸ್ಥ, ಮಂಜುನಾಥ ಉಪಾಧ್ಯ, ಸದಾರಾಮ ಸೋಮಯಾಜಿ, ಸುಬ್ರಹ್ಮಣ್ಯ ಹೇರ್ಳೆ, ಸುಬ್ರಾಯ ಉರಾಳ, ತಾರನಾಥ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು. ಕೆ.ರಾಜಾರಾಮ್ ಐತಾಳ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net