ಇಟ್ಟಸಂದ್ರ ಕೆರೆಗೂ ಎತ್ತಿನಹೊಳೆ ನೀರು

Untitled-2
ಇಟ್ಟಸಂದ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಶರತ್​ ಬಚ್ಚೆಗೌಡ ಭೂಮಿ ಪೂಜೆ ನೆರವೇರಿಸಿದರು. ಬಮುಲ್​ ನಿರ್ದೇಶಕ ಬಿ.ವಿ.ಸತೀಶ್​ಗೌಡ, ಒಕ್ಕಲಿಗರ ಸಂ ನಿರ್ದೇಶಕ ಬಿ.ವಿ.ರಾಜಶೇಖರಗೌಡ, ಇಒ ಡಾ.ಸಿ.ಎನ್​.ನಾರಾಯಣಸ್ವಾಮಿ, ಹಿರಿಯ ಮುಖಂಡ ಐ.ಸಿ.ಮುನಿಶಾಮಗೌಡ ಇದ್ದರು.
Published on

ನಂದಗುಡಿ : ಹೊಸಕೋಟೆ ತಾಲೂಕಿನ ನಂದಗುಡಿ ಹಾಗೂ ಸೂಲಿಬೆಲೆ ಭಾಗದ ಕೆರೆಗಳಿಗೆ ನೀರು ಹರಿಸುವ ಯೋಜನೆಯಲ್ಲಿ ಇಟ್ಟಸಂದ್ರ ಗ್ರಾಮ ಇರಲಿಲ್ಲ. ಆದರೆ ಆ ಪಟ್ಟಿಯಲ್ಲಿ ಇಟ್ಟಸಂದ್ರವನ್ನು ಸೇರಿಸಿ ಎತ್ತಿನಹೊಳೆ ನೀರು ಹರಿಸಲಾಗುವುದು ಎಂದು ಶಾಸಕ ಶರತ್​ ಬಚ್ಚೆಗೌಡ ತಿಳಿಸಿದರು.

ನಂದಗುಡಿ ಹೋಬಳಿಯ ಇಟ್ಟಸಂದ್ರ ಕೆರೆಗೆ ಬಾಗಿನ ಅರ್ಪಣೆ, ಹೈ ಮಾಸ್ಟ್​ ದೀಪ ಉದ್ಘಾಟನೆ ಹಾಗೂ ದಿ. ವೆಂಕಟರಮಣ ಗೌಡರ ಬಡಾವಣೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಂದಗುಡಿ ವ್ಯಾಪ್ತಿಯಲ್ಲಿ ನಿವೇಶನ ವಂಚಿತರಿಗೆ ನಿವೇಶನ ಹಂಚಿಕೆ ಮಾಡಲು 50ಕ್ಕೂ ಹೆಚ್ಚು ಎಕರೆ ಜಾಗವನ್ನು ಗುರುತಿಸಿದ್ದು, ಪಂಚಾಯಿತಿಗೆ ಹಸ್ತಾಂತರಿಸಿ ಲೇ ಹೌಟ್​ ನಿರ್ಮಿಸಿ, ಮೂಲ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗಿದೆ. ಇಟ್ಟಸಂದ್ರ ಗ್ರಾಪಂ ವ್ಯಾಪ್ತಿಯ ಗೆದ್ದಲಹಳ್ಳಿಪುರದ ಸ.ನಂ.78ರಲ್ಲಿ 7.28 ಎಕರೆ ಜಾಗದಲ್ಲಿ ಬಡಾವಣೆ ನಿರ್ಮಿಸಲಾಗುತ್ತಿದ್ದು, ಶ್ರೀ ನಿವೇಶನ ರಹಿತ 196 ಫಲಾನುಭವಿಗಳ ಕುಟುಂಬಕ್ಕೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದರು.

ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಬಿ.ಗೋಪಾಲ್​, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಡಾ.ಸಗೀರ್​ ಅಹಮದ್​, ಗ್ರಾಪಂ ಅಧ್ಯೆ ರೂಪಾ ಚನ್ನಕೇಶವ, ಉಪಾಧ್ಯೆ ನಂದಿನಿ ರವಿ, ವಿಎಸ್​ಎಸ್​ವಿಎನ್​ ಅಧ್ಯಕ್ಷ ಶಂಕರ್​ನಾರಾಯಣ್​, ನಾರಾಯಣಗೌಡ, ನಿರ್ದೇಶಕರಾದ ಎನ್​.ಡಿ. ರಮೇಶ, ಎಚ್​.ಕೆ.ನಾರಾಯಣಗೌಡ, ಎಚ್​.ಎನ್​.ಧಮೇರ್ಶ್​, ಚಂದ್ರಪ್ಪ, ಗ್ರಾಪಂ ಸದಸ್ಯರಾದ ರಮೇಶ್​, ಬಿಂದು ದೇವೇಗೌಡ, ರಾಮಾಂಜಿನಪ್ಪ, ಸರೋಜಮ್ಮ ಜಯರಾಮ್​, ಎಚ್​.ಎಂ.ಮೂರ್ತಿ, ಮಧು, ಲಕ್ಷಿ$್ಮನಾರಾಯಣ್​, ಎನ್​.ಎನ್​.ಮಂಜುನಾಥ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net