ತನಿಖೆಯಿಂದ ಹರಿಕಥೆ ಹೊರಬರಲಿದೆ

abbayya prasad
Published on

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಪ್ರಕರಣದಲ್ಲಿ ಯಾರ ಯಾರ ಹರಿಕಥೆ ಇದೆ ಎಂಬುದು ತನಿಖೆ ನಂತರ ಗೊತ್ತಾಗಲಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ನಡೆದಿರುವ ನೇಹಾ ಮತ್ತು ಅಂಜಲಿ ಪ್ರಕರಣಗಳನ್ನು ಖಂಡಿಸುತ್ತೇನೆ. ಡ್ರಗ್ಸ್ ಮತ್ತು ಗಾಂಜಾ ಮಾಫಿಯಾ ತಡೆಯುವಂತೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸುತ್ತ ಬಂದಿದ್ದೇನೆ. ಹಲವು ಬಾರಿ ಸಭೆ ಕೂಡ ಮಾಡಿ ಸೂಚಿಸಿದ್ದೇನೆ ಎಂದರು.
ಕೊಲೆ ಪ್ರಕರಣದ ನಂತರ ನಾನು ಬಂದಿಲ್ಲ ಎಂಬುದು ಕೆಲವರ ಆರೋಪವಿದೆ. ನಾನು ಫೋಟೋಕ್ಕೆ ಫೋಸು ಕೊಡಲು ಬರುವ ಅವಶ್ಯಕತೆ ಇಲ್ಲ. ಇತರ ಸರ್ಕಾರಿ ಕೆಲಸಗಳು ಇದ್ದವು ಹಾಗಾಗಿ ಬರಲು ಆಗಿದ್ದಿಲ್ಲ. ಸೋಮವಾರ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಆಗಮಿಸಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net