ಈಡೇರಿದೆ ಚನ್ನಮ್ಮ ಪುತ್ಥಳಿ ಸ್ಥಾಪನೆ ಸಂಕಲ್ಪ

26MDG3 CHANNAMMA PUTHTALI
Published on

ಮುಂಡರಗಿ: ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಅವರು ಶುಕ್ರವಾರ ವೀರರಾಣಿ ಕಿತ್ತೂರು ಚನ್ನಮ್ಮ ಪುತ್ಥಳಿ ಅನಾವರಣಗೊಳಿಸಿದರು.

ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಎಸ್.ವಿ. ಪಾಟೀಲ ಮಾತನಾಡಿ, 10 ಲಕ್ಷ ರೂ. ವೆಚ್ಚದಲ್ಲಿ ಪುತ್ಥಳಿ ನಿರ್ವಿುಸಲಾಗಿದೆ. 25 ವರ್ಷದಿಂದ ಸಮಾಜದ ಹಿರಿಯರು ಈ ವೃತ್ತದಲ್ಲಿ ಪುತ್ಥಳಿಯನ್ನು ಸ್ಥಾಪಿಸಬೇಕು ಎಂಬ ಸಂಕಲ್ಪ ಮಾಡಿದ್ದರು. ಅದೀಗ ಕೂಡಿಬಂದಿದೆ ಎಂದರು. ನಿವೃತ್ತ ಪ್ರಾಧ್ಯಾಪಕ ಆರ್.ಎಲ್. ಪೊಲೀಸ್​ಪಾಟೀಲ ಮಾತನಾಡಿ, ಡಾ. ಅನ್ನದಾನೀಶ್ವರ ಶ್ರೀಗಳಿಂದ ಪುತ್ಥಳಿ ಅನಾವರಣಗೊಂಡಿದ್ದು ಸಂತಸ ತಂದಿದೆ ಎಂದರು.

ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಈರಣ್ಣ ಕರಿಬಿಷ್ಠಿ, ಭಾವಿ ಬೆಟ್ಟಪ್ಪ, ಬಸವರಾಜ ಪಲ್ಲೇದ, ಅಶೋಕ ಹಂದ್ರಾಳ, ವೀರೇಶ ಹಡಗಲಿ, ಡಾ.ಅನ್ನದಾನಿ ಮೇಟಿ, ಮಂಜುನಾಥ ಇಟಗಿ, ರಜನಿಕಾಂತ ದೇಸಾಯಿ, ಮಂಜುನಾಥ ಮುಧೋಳ, ಎ.ವಿ. ಹಳ್ಳಿಕೇರಿ, ಬಸವಂತಪ್ಪ ಹೊಸಮನಿ, ಹೇಮಂತಗೌಡ ಪಾಟೀಲ, ವಿ.ಎಫ್. ಗುಡದಪ್ಪನವರ, ಬಸವರಾಜ ದೇಸಾಯಿ, ಡಾ.ಬಿ.ಎಸ್.ಮೇಟಿ, ದೇವಪ್ಪ ಇಟಗಿ, ಸಿದ್ದು ದೇಸಾಯಿ, ನಾಗರಾಜ ಮುರಡಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net