ಸರ್ಕಾರ ಉರುಳಿಸಿ ಕೋಮುವಾದ ಮರು ಸ್ಥಾಪಿಸುವ ಉದ್ದೇಶ

siddaramaiah
Published on

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮಗಳ ಹಗರಣ ನೆಪದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡಿರುವುದು ಪ್ರಜಾಸತ್ತಾತ್ಮಕ ಹಾಗೂ ಸಂವಿಧಾನ ಪರ ಇರುವ ರಾಜ್ಯ ಸರ್ಕಾರ ಉರುಳಿಸಿ, ಕೋಮುವಾದ ಮರು ಸ್ಥಾಪಿಸುವ ಉದ್ದೇಶದ್ದಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ದೇವಗಳ್ಳಿ ಸೋಮಶೇಖರ್ ಕಿಡಿಕಾರಿದರು.
ಮುಡಾದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ಯಾವುದೇ ಹಗರಣ ನಡೆದಿಲ್ಲ. ಅದು ನಡೆದಿರುವುದು ಸಿಎಂ ವಿರುದ್ಧ ಪಾದಯಾತ್ರೆ ನಡೆಸಿದ ಬಿಜೆಪಿ-ಜೆಡಿಎಸ್ ನಾಯಕರಿಂದ. ಹೀಗಾಗಿ ತನಿಖೆ ನಡೆದಲ್ಲಿ ನಿಜವಾದ ಭೂಗಳ್ಳರು ಯಾರು ಎಂಬುದು ಸಮಾಜಕ್ಕೆ ತಿಳಿಯುತ್ತದೆ. ಈ ಭೂಗಳ್ಳರು ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡಿದ್ದು, ಇದರ ಹಿಂದೆ ಮೋದಿ ಹಾಗೂ ಅಮಿತ್ ಷಾ ಅವರ ಕೈವಾಡವಿದೆ. ಸಾಮಾಜಿಕ ನ್ಯಾಯ ಪರಿಕಲ್ಪನೆ ನುಚ್ಚು ನೂರು ಮಾಡಿ, ಕೋಮು ದ್ವೇಷವೇ ತುಂಬಿರುವ ಹಿಂದುತ್ವವಾದಿ ಸರ್ಕಾರ ರಚಿಸುವುದು ಇವರ ಉದ್ದೇಶ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮುಖಂಡರಾದ ಕಿನಕಹಳ್ಳಿ ಬಿ.ರಾಚಯ್ಯ, ಬೆಲವತ್ತ ರಾಮಚಂದ್ರ, ಟಿ.ನಾರಾಯಣ, ಪ್ರಸನ್ನ ತಳೂರು, ಎ.ಆರ್.ಕಾಂತರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net