ಕೀಟ ಚಿಕ್ಕದು, ಭೀತಿ ದೊಡ್ಡು

MLK DINACHARANE 21
Published on

ಮೊಳಕಾಲ್ಮೂರು: ಕೀಟ ಚಿಕ್ಕದಾದರೂ ಜನರಲ್ಲಿ ದೊಡ್ಡ ಭೀತಿ ಉಂಟು ಮಾಡುವ ಸೊಳ್ಳೆಗಳ ಸಂಪೂರ್ಣ ನಿಯಂತ್ರಣಕ್ಕೆ ಪರಿಸರ ಸ್ವಚ್ಛತೆಯೇ ಮದ್ದು ಎಂದು ಟಿಎಚ್‌ಒ ಡಾ.ಮನೋಜ್ ತಿಳಿಸಿದರು.

ತಾಲೂಕು ಆರೋಗ್ಯ ಇಲಾಖೆ ಸಹಯೋಗದಲ್ಲಿ ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಸೊಳ್ಳೆ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಮನೆ ಮತ್ತು ನೆರೆಹೊರೆ ಪರಿಸರದಲ್ಲಿ ದೀಘ ಕಾಲ ನಿಂತ ನೀರಿನ ತಾಣ, ಘನ ತ್ಯಾಜ್ಯ ವಸ್ತುಗಳಿಂದ ಹರಡುವ ಮಲೀನದಿಂದ ಸೊಳ್ಳೆಗಳು ಉತ್ಪತ್ತಿಯಾಗಿ, ಕಾಯಿಲೆಗೆ ಕಾರಣವಾಗುತ್ತವೆ ಎಂದರು.

ಕ್ಷೇತ್ರ ಕಾರ್ಯಕ್ರಮ ಅಧಿಕಾರಿ ನವೀನ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಟಿ.ಕುಮಾರ್, ಸಮುದಾಯ ಆರೋಗ್ಯಾಧಿಕಾರಿ ರವಿಶಂಕರ್, ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ಸರಸ್ವತಿ, ಆಶಾ ಕಾರ್ಯಕರ್ತೆಯರಾದ ಮಲ್ಲಮ್ಮ, ಹೊನ್ನೂರಮ್ಮ, ನಂದಕುಮಾರಿ, ಮಹಾಲಕ್ಷ್ಮೀ, ಭಾಗ್ಯಮ್ಮ, ಶಾಹಿನ್, ಶಾಂತಕುಮಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net