

ಹುಬ್ಬಳ್ಳಿ: ವಿನಯ ಕುಲಕರ್ಣಿ ಅವರನ್ನು ಟಾರ್ಗೆಟ್ ಮಾಡಲಾಗಿದೆ. ಹಾಗಾಗಿಯೇ ಅವರು ತಮಗಾಗಿರುವ ಅನ್ಯಾಯದ ಕುರಿತು ಮಾತನಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ವರ್ಷದಿಂದ ಅವರು ತಮ್ಮ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ. ಕುಟುಂಬವನ್ನು ನೋಡಲು ಆಗಿಲ್ಲ. ಅವರ ಮನಸ್ಸಿಗೆ ಘಾಸಿಯಾಗಿದೆ. ಹಾಗಾಗಿಯೇ ಅವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ ಎಂದರು.
ಅಪಾರ ಗೌರವ: ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಬಗ್ಗೆ ಅಪಾರ ಗೌರವವಿದೆ. ಅವರದು ಭಾವೈಕ್ಯತಾ ಮಠ. ಅವರದ್ದೇ ಆದ ಭಕ್ತ ಸಮೂಹ ರಾಜ್ಯಾದ್ಯಂತ ಇದೆ. ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡುವುದು ಅಥವಾ ಬೆಂಬಲ ಸೂಚಿಸುವ ಬಗ್ಗೆ ನನಗೆ ಗೊತ್ತಿಲ್ಲ. ವಿನಯ ಕುಲಕರ್ಣಿ ಸ್ವಾಮೀಜಿ ಅವರನ್ನು ಸಮರ್ಥಿಸಿಕೊಂಡಿರುವುದು ಅವರ ವೈಯಕ್ತಿಕ ಎಂದರು.