ಗಾಯಾಳುಗಳಿಗೆ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ

h22-KMCRI 2
Published on

ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಒಬ್ಬ ಮಾರ್ಗ ಮಧ್ಯೆ ಮೃತಪಟ್ಟಿದ್ದು, ಇನ್ನುಳಿದ 10 ಗಾಯಾಳುಗಳಿಗೆ ಇಲ್ಲಿಯ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತರಕಾರಿ ವ್ಯಾಪಾರಿ ಮಂಟೂರ ರಸ್ತೆ ಮಿಲ್ಲತ್ ನಗರ ನಿವಾಸಿ ಜಲಾಲಬಾಷಾ ಖಾದರಗೌಸ್ ಮಂಚಣಿ (30) ಮೃತಪಟ್ಟಿದ್ದಾರೆ. ಮೃತನಿಗೆ ಇಬ್ಬರು ಪುತ್ರಿಯರು, ಪುತ್ರ ಹಾಗೂ ಆರು ತಿಂಗಳ ಗರ್ಭಿಣಿ ಪತ್ನಿ ಇದ್ದಾರೆ.

ಗಾಯಗೊಂಡಿರುವ ಸವಣೂರ ಮೂಲದ ಮಲ್ಲಿಕ ರೆಹಾನ ಅಕ್ಕಿ, ಅಪ್ಸರ ಖಂಜೇರಾ, ಅಶ್ರಫ್ ಲತೆ, ನಿಜಾಮುದ್ದೀನ್ ಸೌದಾಗರ, ಖಾಜಾಹುಸೇನ್ ಕಿಸ್ಮತಘರ, ಖಾಜಾಮೈನು ಕಲ್ಲಿನೂರ, ಮಹ್ಮದಸಾದಿಕ ಬಟೇರಿ, ಮರ್ದಾನಸಾಬ್ ಕಾರಡಗಿ, ಇರ್ಫಾನ್ ಗುಡಗೇರಿ, ಜಾಫರ ಸವಣೂರ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯಲ್ಲಾಪುರ ಬಳಿ ಸಂಭವಿಸಿದ್ದ ಅಪಘಾತದಲ್ಲಿ ಗಾಯಗೊಂಡಿದ್ದ ಹನ್ನೊಂದು ಗಾಯಾಳುಗಳನ್ನು ಕೆಎಂಸಿಆರ್‌ಐ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಈ ಪೈಕಿ ಒಬ್ಬ ಮಾರ್ಗ ಮಧ್ಯ ಮೃತಟ್ಟಿದ್ದು, ಉಳಿದ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಕೆಎಂಸಿಆರ್‌ಐ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net