ಪದಗ್ರಹಣ ಸಮಾರಂಭ ಇಂದು

2 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಂಟರ್​ನ್ಯಾಷನಲ್​ ಇನ್ನರ್​ ವೀಲ್​ ಕ್ಲಬ್​ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಜು. 3ರಂದು ಸಂಜೆ 4.30ಕ್ಕೆ ಇಲ್ಲಿನ ವಿಠ್ಠಲ್​ ಕ್ಲಿನಿಕ್​ನ ತೇಜ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಕ್ಲಬ್​ನ ನೂತನ ಅಧ್ಯಕ್ಷೆ ಶೋಭಾ ಹಿರೇಗೌಡರ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಥಿಯಾಗಿ ಜ್ಯೋತಿ ಪಾಟೀಲ ಆಗಮಿಸಲಿದ್ದಾರೆ. ಕಾರ್ಯದರ್ಶಿಯಾಗಿ ಯಶೋಧಾ ಅಂಗಡಿ, ಐಎಸ್​ಒ ಆಗಿ ಸುಲೋಚನಾ ಅಂಗಡಿ, ಖಜಾಂಚಿಯಾಗಿ ಗೀತಾ ಹಂಚಾಟೆ, ಎಡಿಟರ್​ ಆಗಿ ಸುಮಂಗಲಾ ಹಿರೇಮಠ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದರು.
ನಮ್ಮ ಅವಧಿಯಲ್ಲಿ ಗರ್ಭಕಂಠದ ಕ್ಯಾನ್ಸರ್​ ಪತ್ತೆ ಮತ್ತು ಜಾಗೃತಿ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ಹೊಲಿಗೆ ಯಂತ್ರಗಳ ವಿತರಣೆ, ಆರೋಗ್ಯ ತಪಾಸಣೆ ಶಿಬಿರಗಳು ಸೇರಿ ಇನ್ನೂ ಅನೇಕ ಕಾರ್ಯಕ್ರಮ ಆಯೋಜಿಸಲಾಗುವುದು. ಈ ಹಿಂದಿನ ಪದಾಧಿಕಾರಿಗಳು ಸಹ ಅನೇಕ ಉತ್ತಮ ಕಾರ್ಯ ಮಾಡಿದ್ದಾರೆ. ಅವರ ಯೋಜನೆಗಳ ಜತೆಗೆ ನಮ್ಮ ನೂತನ ಯೋಜನೆಗಳನ್ನೂ ಮುಂದುವರಿಸುತ್ತೇವೆ ಎಂದರು.
ಯಶೋಧಾ ಅಂಗಡಿ, ಪೂರ್ಣಾ ಪಾಟೀಲ, ಪ್ರೀತಿ ಮಂತ್ರಿ, ದಿವ್ಯಾ ದೇಶಪಾಂಡೆ, ಕಲ್ಪನಾ ನಾಯಕ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net