ವ್ಯಕ್ತಿಗೆ ಹಣಕಾಸಿನ ಸಾಕ್ಷರತೆ ಅಗತ್ಯ

IMG20251003172527.jpg
Published on

ಧಾರವಾಡ: ಸಾಮಾನ್ಯ ವ್ಯಕ್ತಿ ಹಣಕಾಸಿನ ಸಾಕ್ಷರತೆ ಅರಿತುಕೊಂಡು ಮತ್ತು ಹಣಕಾಸಿನ ನಿರ್ವಹಣೆ ಮಾಡುವುದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಅಗತ್ಯವಿದೆ ಎಂದು ಧಾರವಾಡದ ಕಿಟೆಲ್ ಕಾಲೇಜಿನ ಅರ್ಥಶಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ.ಸಿ.ಪಿ.ಮನೋಹರ ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ಕಲಾ ಕಾಲೇಜಿನ ಅರ್ಥಶಾಸ ವಿಭಾಗವು ಫ್ಯಾರನ್ ಸಭಾಂಗಣದಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ಅರ್ಥಶಾಸ ಸ್ಟಡಿ ಸರ್ಕಲ್ ಶೈಕ್ಷಣಿಕ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ, ‘ಜೀವನದಲ್ಲಿ ಅರ್ಥಶಾಸದ ಮಹತ್ವ’ ಎಂಬ ವಿಷಯದ ಕುರಿತು ಮಾತನಾಡಿದರು.

ಭವಿಷ್ಯದಲ್ಲಿ ನಾವು ಏನಾಗಬೇಕು ಎಂಬುದನ್ನು ನಿರ್ಧರಿಸಿಕೊಳ್ಳಬೇಕು. ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಶಿಕ್ಷಕರ ಮಾರ್ಗದರ್ಶನ ಪಡೆದುಕೊಂಡು ಜೀವನದಲ್ಲಿ ಯಶಸ್ಸು ಹೊಂದಬೇಕು ಎಂದರು.

ಅರ್ಥಶಾಸದ ಅಧ್ಯಯನದಿಂದ ಹೆಚ್ಚು ಜ್ಞಾನ ಪಡೆಯಲು ಸಾಧ್ಯ. ಉತ್ತಮ ಕೌಶಲಗಳನ್ನು ವಿದ್ಯಾರ್ಥಿ ದೆಸೆಯಲ್ಲಿ ಅಳವಡಿಸಿಕೊಳ್ಳಬೇಕು. ಪದವಿ ಜತೆಗೆ ಇತರೆ ಅರ್ಥಶಾಸಕ್ಕೆ ಸಂಬಂಧಿಸಿದ ಸರ್ಟಿಫಿಕೇಟ್ ಕೋರ್ಸ್ ಮಾಡುವುದು ಅಗತ್ಯ. ಅರ್ಥಶಾಸ ವಿಷಯದ ಅಧ್ಯಯನದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚು ಉಪಯುಕ್ತವಾಗಿದೆ ಎಂದರು.

ಕರ್ನಾಟಕ ಕಾಲೇಜಿನ ಅರ್ಥಶಾಸ ವಿಭಾಗದ ಮುಖ್ಯಸ್ಥೆ ಡಾ.ಸಿ.ಅನ್ನಪೂರ್ಣ ಮಾತನಾಡಿ, ಪ್ರಯತ್ನಿಸಬೇಕು. ಪದವಿ ಓದುವಾಗ ಹಂತ ಹಂತವಾಗಿ ವಿದ್ಯಾರ್ಥಿಗಳು ಪ್ರಬುದ್ಧ ವಿಚಾರಗಳನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳಾದವರು ಜೀವನದಲ್ಲಿ ಶಿಸ್ತು ಸಂಯಮ ಬೆಳಸಿಕೊಳ್ಳಬೇಕು. ಅರ್ಥಶಾಸ ಅಧ್ಯಯನದ ಜತೆಗೆ ಇತರೆ ವಿಷಯಗಳನ್ನು ಓದಲು ಪ್ರಯತ್ನಿಸಬೇಕು. ಅರ್ಥಶಾಸ ಕ್ಷೇತ್ರದಲ್ಲಿ ಸಂಶೋಧನೆ ಸೇರಿ ವಾಣಿಜ್ಯ, ಶೇರು ಮಾರುಕಟ್ಟೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿುಲ ಅವಕಾಶಗಳಿದ್ದು, ವಿದ್ಯಾರ್ಥಿಗಳು ದೈಹಿಕ ಮಾನಸಿಕ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.

ಡಾ.ಓದೇಗೌಡ, ಡಾ.ರಾಘವೇಂದ್ರ ಪಾಟೀಲ, ಡಾ.ನಯನಾ ಪಾಟೀಲ, ಡಾ.ಬಸವರಾಜ, ಗೌರಿ ಜೋಶಿ, ಆನಂದ ಬೆಳ್ಳಿಕಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net