2ನೇ ದಿನ ಪೂರೈಸಿದ ಅರ್ನಿದಿಷ್ಟಾವಧಿ ಧರಣಿ

The indefinite strike has completed its 2nd day.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿಜಯಪುರದ ಜಿಲ್ಲಾಧಿಕಾರಿ ಕಚೇರಿ ಬಳಿ ಭಾರತೀಯ ಕಿಸಾನ್​ ಸಂ&ಕರ್ನಾಟಕ ಪ್ರದೇಶ ಕರ್ನಾಟಕ ಉತ್ತರ ಪ್ರಾಂತದ ಪದಾಧಿಕಾರಿಗಳು ಅರ್ನಿದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದರು. ಭೀಮಸೇನ ಕೊಕರೆ, ರವೀಂದ್ರ ಮೇಡೆಗಾರ, ಮಲ್ಲನಗೌಡ ಪಾಟೀಲ ಮತ್ತಿತರರಿದ್ದಾರೆ.
Published on

ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಭಾರತೀಯ ಕಿಸಾನ್​ ಸಂ&ಕರ್ನಾಟಕ ಪ್ರದೇಶ ಕರ್ನಾಟಕ ಉತ್ತರ ಪ್ರಾಂತದ ವತಿಯಿಂದ ನಡೆಸುತ್ತಿರುವ ಅರ್ನಿದಿಷ್ಟಾವಧಿ ಧರಣಿ ಸತ್ಯಾಗ್ರಹ ಮಂಗಳವಾರ ಎರಡನೇ ದಿನ ಪೂರೈಸಿತು.

ಭಾರತೀಯ ಕಿಸಾನ ಸಂ ಕರ್ನಾಟಕ ಪ್ರದೇಶ ಜಿಲ್ಲಾಧ್ಯಕ್ಷ ಭೀಮಸೇನ ಕೊಕರೆ ಮಾತನಾಡಿ, ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ 1ನೇ ಹಂತದಲ್ಲಿ 28 ಸಾವಿರ ಹೆಕ್ಟೇರ್​ಗೆ ನೀರಾವರಿ ಸೌಲಭ್ಯ ಒದಗಿಸಬೇಕು. ಇನ್ನುಳಿದ ಚಡಚಣ, ಬಬಲೇಶ್ವರ ಹಾಗೂ ವಿಜಯಪುರ ತಾಲೂಕಿನ 21 ಸಾವಿರ ಹೆಕ್ಟೇರ್​ಗೆ ನೀರಾವರಿ ಸೌಲಭ್ಯ ಒದಗಿಸುವ ಕಾಮಗಾರಿಗೆ ಟೆಂಡರ್​ ಕರೆದು ಸಮರೋಪಾದಿಯಲ್ಲಿ ಕಾರ್ಯ ಪೂರ್ಣಗೊಳಿಸಬೇಕು. ಆಲಮಟ್ಟಿ 524.256 ಮೀಟರ್​ಗೆ ಎತ್ತರಿಸಿ ಸಂತ್ರಸ್ತರಿಗೆ ಸೂಕ್ತ ಪರಿಹಾರ, ಪುನರ್ವಸತಿ ಕಲ್ಪಿಸಿ ಕೃಷ್ಣಾ ಕೊಳ್ಳದ 3ನೇ ಹಂತದ ಎಲ್ಲ ನೀರಾವರಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಭೂಮಿಗೆ ನೀರು ಹರಿಸುವಂತೆ ಆಗ್ರಹಿಸಿದರು.

ಜಿಲ್ಲೆಯ ಕೆರೆಗಳಿಗೆ ನೀರು ತುಂಬಲು ಕ್ರಮ ಕೈಕೊಳ್ಳಬೇಕು. ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದ ಹಳಿ ಕೆರೆಗೆ ನೀರು ಹರಿಸಬೇಕು. ಡೋಣಿ ನದಿಯ ಹೂಳು ಎತ್ತಿ ಜಲಾನಯನ ಕಾರ್ಯಕ್ರಮ ಕೈಗೊಳ್ಳುವುದು ಕುರಿತು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಮತ್ತು ಕೇಂದ್ರ ಗಮನಕ್ಕೂ ತಂದರೂ ಇನ್ನೂವರೆಗೂ ಯಾವುದೇ ಕ್ರಮ ಕೆಗೊಂಡಿಲ್ಲ ಎಂದು ದೂರಿದರು.

ಕೂಡಲೇ ಬೇಡಿಕೆಗಳನ್ನು ಈಡೇರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಪ್ರಸಕ್ತ ಸಾಲಿನ ಬಜೆಟ್​ನಲ್ಲಿ ಕಾಮಗಾರಿಗಳಿಗೆ ಹಣ ನಿಗದಿಪಡಿಸಿ ಟೆಂಡರ್​ ಕರೆದು ಸಮರೋಪಾದಿಯಲ್ಲಿ ಕೈಕೊಳ್ಳುವಂತೆ ಒತ್ತಾಯಿಸಿದರು.

ಅಷ್ಟಮಠದ ಯೋಗಾನಂದ ಸ್ವಾಮೀಜಿ, ಸಂದ ಜಿಲ್ಲಾಧ್ಯಕ್ಷ ರವಿಂದ್ರ ಮೇಡೆಗಾರ, ಮಲ್ಲನಗೌಡ ಪಾಟೀಲ, ಗುರುನಾಥ ಬಗಲಿ, ಬಸವರಾಜ ರೂಡಗಿ, ಹನುಮಂತಗೌಡ ಪಾಟೀಲ, ಸಾವಿತ್ರಿ ಬರಡೋಲ, ಶ್ರೀಶೈಲ ಆಳೂರ, ಲಕ್ಷ$್ಮಣ ಬೂದಿಹಾಳ, ದಿನೇಶ ದೇವರಮನಿ, ಅಶೋಕ ಅಲ್ಲಾಪುರ, ಚಂದ್ರಗೌಡ ಬಿರಾದಾರ, ಮಲ್ಲಿಕಾರ್ಜುನ ತೇಲಿ, ಚಂದ್ರಶೇಖರ ಖಾನಾಪೂರ, ರಾಮಚಂದ್ರ ಜಾಧವ, ದಿನೇಶ ಸಾತಲಗಾಂವ, ಪ್ರಕಾಶ ಬಿರಾದಾರ, ಸೋಮನಿಂಗ ಬಿರಾದಾರ, ಮಲ್ಲನಗೌಡ ಪಾಟೀಲ, ಬಾಬುಲಾಲ ಹೊನವಾಡ, ರುದ್ರಪ್ಪ ಪೂಜಾರಿ, ವಿಠಲ ಕೈರಾವಕರ, ಮಹಾಂತೇಶ ಬಿರಾದಾರ, ಹಣಮಂತ ಕಂಬಾರ, ಗುರಪ್ಪ ಚಳಗಿ, ಶಿವರಾಯ ಕಂಬಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net