

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಟಕ ವತಿಯಿಂದ ಇಲ್ಲಿನ ಹಳಿಯಾಳ ರಸ್ತೆ ಲಿಂಗಾಯತ ಭವನದಲ್ಲಿ ಸಾಂಸತಿಕ ನಾಯಕ ವಿಶ್ವಗುರು ಶ್ರೀ ಬಸವಣ್ಣನವರು ಚಿಂತನೆ ಹಾಗೂ "ಮಹಾದಾನಿ ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿ' ಸಭಾಭವನ ಉದ್ಘಾಟನೆ ಸಮಾರಂಭವನ್ನು ಜೂ. 14ರಂದು ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ ಎಂದು ಮಹಾಸಭಾ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಗುರುಮಹಾಂತ ಸ್ವಾಮೀಜಿ, ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಚಿವ ಈಶ್ವರ ಖಂಡ್ರೆ ಭವನ ಉದ್ಘಾಟಿಸಲಿದ್ದಾರೆ ಎಂದರು.
ಅತಿಥಿಗಳಾಗಿ ಸಚಿವರಾದ ಎಂ.ಬಿ. ಪಾಟೀಲ, ಸಂತೋಷ ಲಾಡ, ಕೆಎಲ್ಇ ಅಧ್ಯಕ್ಷ ಪ್ರಭಾಕರ ಕೋರೆ, ಶಾಸಕರಾದ ಅರವಿಂದ ಬೆಲ್ಲದ, ಎಂ.ಆರ್. ಪಾಟೀಲ, ಮಹೇಶ ಟೆಂಗಿನಕಾಯಿ ಆಗಮಿಸಲಿದ್ದಾರೆ. ಗುರುರಾಜ ಹುಣಸಿಮರದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸುಮಾರು 1 ಕೋಟಿ ರೂ. ವೆಚ್ಚದಲ್ಲಿ 350 ಆಸನದ ಸಾಮರ್ಥ್ಯ ಹೊಂದಿರುವ ಭವನ ನಿರ್ಮಾಣ ಮಾಡಲಾಗಿದೆ. ಇದರ ಪಕ್ಕದಲ್ಲೇ ಸುಸಜ್ಜಿತ ಮೀಟಿಂಗ್ ಕೊಠಡಿ ನಿಮಿರ್ಸಲಾಗಿದೆ. ಮುಂದಿನ ದಿನಗಳಲ್ಲಿ ಭವನವನ್ನು ಸಂರ್ಪೂಣ ಹವಾನಿಯಂತ್ರಿವಾಗಿ ಪರಿವತಿರ್ಸಲು ಚಿಂತಿಸಲಾಗಿದೆ. ಸಮಾಜದ ಗಣ್ಯ ವ್ಯಕ್ತಿಗಳು, ದಾನಿಗಳ ನೆರವಿನಿಂದ ಉತ್ತಮ ಭವನ ನಿಮಿರ್ಸಲು ಸಾಧ್ಯವಾಗಿದೆ ಎಂದರು.
ಶಿವಶರಣ ಕಲಬಶೆಟ್ಟರ, ಬಸವರಾಜ ಗೋಲಪ್ಪನವರ, ಸಿದ್ದಣ್ಣ ಕಂಬಾರ, ರಾಜೇಂದ್ರ ಕಪಲಿ, ಬಸವಂತಪ್ಪ ತೋಟದ, ಮಹಾಂತೇಶಗೌಡ ಪಾಟೀಲ, ಶಂಕರ ಕುಂಬಿ, ಮಲ್ಲನಗೌಡ ಪಾಟೀಲ, ಇತರರು ಇದ್ದರು.