ಸಮಾಜದಲ್ಲಿ ಗುರುಸ್ಥಾನ ಮಹತ್ವದ್ದು

h14-ayurveda
Published on

ಹುಬ್ಬಳ್ಳಿ: ಧಾರವಾಡ ಹೊಯ್ಸಳ ನಗರದ ಮಹಾಗಣಪತಿ ಆಯರ್ವೇದ ವೈದ್ಯಕಿಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಶುಕ್ರವಾರ ಶಿಕ್ಷಕರ ದಿನವನ್ನು ಆಚರಿಸಲಾಯಿತು.

ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಚಂದ್ರಶೇಖರ ಸಿಂಧಗಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಶಿಕ್ಷಕ ಅಥವಾ ಗುರು ಸ್ಥಾನ ಪ್ರಮುಖವಾದದು. ಗುರು ಕಲಿಸಿದ ಜೀವನ ಪರ್ಯಂತ ನೆನಪಿನಲ್ಲಿ ಉಳಿಯಲಿದೆ. ಜೀವನದ ಮೌಲ್ಯವನ್ನು ಪ್ರಜ್ವಲಗೊಳಿಸಲಿದೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜೀವನ ಸಂದೇಶಗಳನ್ನು ಶಿಕ್ಷಕರು ಮತ್ತು ಮಕ್ಕಳು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ಡಾ. ಅಶೋಕ ಬಂಗಾರಶೆಟ್ಟರ್, ಪ್ರಾಚಾರ್ಯ ಡಾ. ಶಂಭುಲಿಂಗ ತೆಗ್ಗಿ, ಉಪ-ಪ್ರಾಚಾರ್ಯ ಡಾ.ವಿ.ಎಂ. ಸಬರದ, ರಾಚಯ್ಯ ಪಾಟೀಲ ಹಿರೇಮಠ, ಡೀನ್ ಡಾ. ಪ್ರಕಾಶ ತಾರಿವಾಳ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net