ಕುಟುಂಬ ನಿರ್ವಹಣೆಯಲ್ಲಿ ತಂದೆ ಪಾತ್ರ ಮಹತ್ವ

5sri-2
Published on

ಶೃಂಗೇರಿ: ಹೆತ್ತ ಮಕ್ಕಳೊಡನೆ ಭಾವನಾತ್ಮಕವಾದ ಒಡನಾಟವಿಲ್ಲದಿರುವುದೇ ನೈತಿಕ

ಅಧಃ ಪತನಕ್ಕೆ ಕಾರಣವಾಗುತ್ತಿದೆ. ಕುಟುಂಬದ ನಿರ್ವಹಣೆಯಲ್ಲಿ ತಂದೆಯ ಪಾತ್ರ

ಮಹತ್ವ ಎಂದು ಸರ್ಕಾರಿ ಪ್ರೌಢಶಾಲೆ ಸಂಸ್ಕೃತ ಉಪನ್ಯಾಸಕ ಶ್ರೀಶ ಹೇಳಿದರು.

ಕೂತಗೋಡು ಗ್ರಾಮ ಪಂಚಾಯಿತಿಯ ಕುಂಬಾರಕೊಪ್ಪ ವೆಂಕಪ್ಪಚಾರ್ಯ

ಮನೆಯಂಗಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಸುಶೀಲಮ್ಮ ಶ್ಯಾಮಚಾರ್ಯ

ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕುಟುಂಬ ನಿರ್ವಹಣೆಯಲ್ಲಿ ತಂದೆ ಪಾತ್ರ ಬಗ್ಗೆ

ಮಾತನಾಡಿದರು. ಸಾಮಾಜಿಕ ಕಟ್ಟುಪಾಡುಗಳಲ್ಲಿ ಬದುಕುವ ನಾವು ಅರಿಷಡ್

ವರ್ಗಗಳಿಂದ ದೂರವಾಗಿದ್ದು, ಆದರ್ಶಮಯವಾಗುವುದು ತುಂಬಾ ಕಠಿಣ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ ಮಾತನಾಡಿ, ಸಾಹಿತ್ಯ

ಪರಿಷತ್‌ನಿಂದ ನಿರಂತರವಾಗಿ ಕನ್ನಡ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ದತ್ತಿ

ಉಪನ್ಯಾಸವನ್ನು ಮನೆಯಂಗಳದಲ್ಲಿ ಆಯೋಜಿಸಿರುವುದು ಅರ್ಥಪೂರ್ಣ

ಕಾರ್ಯಕ್ರಮವಾಗಿದೆ ಎಂದರು.

ಕಲ್ಕುಳಿ ಜಗದೀಶ್ ಹೆಗ್ಡೆ ಉದ್ಘಾಟಿಸಿದರು. ಜಿಲ್ಲಾ ಕಸಾಪ ಪ್ರಧಾನ ಸಂಚಾಲಕ ಆಗುಂಬೆ

ಗಣೇಶ್ ಹೆಗ್ಡೆ, ತಾಲೂಕು ಕಸಾಪ ಮಾಜಿ ಅಧ್ಯಕ್ಷೆ ಪುಷ್ಪಾ ಲಕ್ಷ್ಮೀನಾರಾಯಣ, ಮಹಿಳಾ

ಘಟಕದ ಅಧ್ಯಕ್ಷೆ ಸುಮಂಗಲ ಆನಂದಸ್ವಾಮಿ, ನಿವೃತ್ತ ಶಿಕ್ಷಕ ಭಾಸ್ಕರಚಾರ್ಯ, ಕೃಷಿಕ

ಹೆಚ್ಗುಂದ ವೆಂಕಟೇಶ್, ಶೂನ್ಯ ರಮೇಶ್, ಆನಂದಸ್ವಾಮಿ, ವೆಂಕಟೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net