ಅಜ್ಞಾನ ಕಳೆದ ಸಂತ ಸೇವಾಲಾಲ್

15savadatti1
Published on

ಸವದತ್ತಿ: ತತ್ತ್ವದ ಮೂಲಕ ಜೀವನಾನುಭವ ಹಾಗೂ ಮೌಲ್ಯಗಳನ್ನು ಸಾರಿ ಜನರ ಅಜ್ಞಾನ ಕಳೆದ ಸಂತ ಸೇವಾಲಾಲ್ ಮಹಾರಾಜರ ಆದರ್ಶ ಯುವಕರು ಪಾಲಿಸಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಅವರ 286ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ವೈವಿಧ್ಯತೆ ಹಾಗೂ ಸಂಸ್ಕೃತಿಗೆ ಸಂತರ ಕೊಡುಗೆ ಅಪಾರವಾಗಿದೆ. ಅಂತಹ ಮಹಾನ್ ಸಂತರ ಸಾಲಿನಲ್ಲಿ ಲಂಬಾಣಿ ಸಮುದಾಯದ ಆರಾಧ್ಯ ದೈವ ಸೇವಾಲಾಲ್ ಮಹಾರಾಜರು ಅಗ್ರ ಗಣ್ಯರಾಗಿದ್ದಾರೆ ಎಂದರು.

ಸೇವಾಲಾಲ್‌ರು ತಮ್ಮ ಲೀಲೆ ಹಾಗೂ ಪವಾಡಗಳ ಮೂಲಕ ಜನರ ಮನಸ್ಸಿನಲ್ಲಿ ಗುರು ಸ್ಥಾನ ಪಡೆದಿದ್ದಾರೆ. ಸತ್ಯ, ಅಹಿಂಸೆ, ದಯೆ, ಕರುಣೆಗಳನ್ನು ಪಾಲಿಸುವ ಮೂಲಕ ಧರ್ಮಾತೀತರಾಗಬೇಕು. ಪವಿತ್ರ ಮಾನವ ಜನ್ಮವನ್ನು ಸಾರ್ಥಕಪಡಿಸಿಕೊಳ್ಳುವ ಜತೆಗೆ ಪರಸ್ಪರ ಸಹಾಯ, ಸಹಕಾರ ಹಾಗೂ ಮನೋಭಾವ ರೂಢಿಸಿಕೊಳ್ಳಬೇಕೆಂದು ಸಾರಿದ ಸೇವಾಲಾಲ್‌ರು ಮಾದರಿಯಾಗಿದ್ದಾರೆ. ಸಮುದಾಯದ ಅಭಿವೃದ್ಧಿಗೆ ಬದ್ಧವಾಗಿದ್ದೇನೆ ಎಂದು ತಿಳಿಸಿದರು.

ಉಪ ತಹಸೀಲ್ದಾರ್ ಎಂ.ಎನ್.ಮಠದ, ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಸಮಾಜ ಕಲ್ಯಾಣಾಧಿಕಾರಿ ಆರ್.ಆರ್.ಕುಲಕರ್ಣಿ, ಪಿಎಸ್‌ಐ ಕಲ್ಮೇಶ ಬನ್ನೂರ, ಯಲ್ಲಪ್ಪ ಗೊರವನಕೊಳ್ಳ, ಗ್ಯಾರಂಟಿ ಅಧ್ಯಕ್ಷ ಶಿವಕುಮಾರ ರಾಠೋಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲು ಜಕಾತಿ, ರಾಮಾಚಾರಿ ಲಮಾಣಿ, ಪ್ರಕಾಶ ಲಮಾಣಿ, ವಿಜಯ ಲಮಾಣಿ, ಪುಂಡಲೀಕ ಲಮಾಣಿ, ರಾಮಣ್ಣ ಲಮಾಣಿ, ರಮೇಶ ಲಮಾಣಿ, ರವಿ ಲಮಾಣಿ, ಪರಶುರಾಮ ಲಮಾಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net