ನಂದಿ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಸಂಪನ್ನ

15ATHANIGRAMIN3
Published on

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಅನಂತಪುರ ಗ್ರಾಮದಲ್ಲಿ ಮಹಾದೇವ ಮಂದಿರದ ಕಂಬಿ ಐದೇಶಿ ಹಾಗೂ ನಂದಿ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಸೋಮವಾರ ವಿಜೃಂಭಣೆಯಿಂದ ಜರುಗಿತು.

ಬೆಳಗ್ಗೆ ಮಹಾದೇವ ದೇವರ ಗದ್ದುಗೆಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಗ್ರಾಮಸ್ಥರು ನೈವೇದ್ಯ ಅರ್ಪಿಸಿ ದರ್ಶನ ಪಡೆದರು. ನಂತರ ಗ್ರಾಮದ ಅಗಸಿಯಿಂದ ಎಲ್ಲ ಬಡಾವಣೆಗಳಲ್ಲಿ ಕುಂಭೋತ್ಸವದೊಂದಿಗೆ ನಂದಿ ವಿಗ್ರಹದ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತಂದು ಬೆಳ್ಳಂಕಿಯ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ವಿಗ್ರಹ ಪ್ರತಿಷ್ಠಾಪಿಸಿದರು. ಅರ್ಚಕ ಕುಮಾರ ವಿರಕ್ತಮಠ, ಅಶೋಕ ಇರಲಿ, ಸದಾಶಿವ ಜಿರಗಾಳೆ, ಜಗದೀಶ ಮಾಳಿ, ಅಯ ಹಿರೇಮಠ, ನಾರಾಯಣ ಮಾಡಿಗಾಳ, ಮಲ್ಲಪ್ಪ ಪಡಸಲಗಿ, ಸಂಗೀತಾ ಇರಳಿ, ದಾನಮ್ಮ ಹಿರೇಮಠ, ಜಯಶ್ರೀ ಮಠಪತಿ, ಸುನೀತಾ ಜಿರಗಾಳೆ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net