ಬೇವಿನಾಳದಲ್ಲಿ ಕನಕದಾಸ ಮೂರ್ತಿ ವಿರೂಪ, ಅಗತ್ಯ ಕ್ರಮಕ್ಕೆ ತಹಸೀಲ್ದಾರ್ ಎಂ. ಕುಮಾರಸ್ವಾಮಿ ಸೂಚನೆ

Kanakadasa is deformed
ಕಾರಟಗಿ ತಾಲೂಕಿನ ಬೇವಿನಾಳದಲ್ಲಿ ವಿರೂಪಗೊಂಡ ಕನಕದಾಸ ಮೂರ್ತಿ ಸ್ಥಳಕ್ಕೆ ತಹಸೀಲ್ದಾರ್ ಎಂ. ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು. ಪಿಡಿಒ ಪ್ರಕಾಶ್ ಹಿರೇಮಠ, ಕಂದಾಯ ಇಲಾಖೆ ಅಧಿಕಾರಿಗಳಾದ ಸಂಗಮ್ಮ, ದೊಡ್ಡನಗೌಡ ಇದ್ದರು.
Published on

ಕಾರಟಗಿ: ತಾಲೂಕಿನ ಬೇವಿನಾಳ ಗ್ರಾಮದಲ್ಲಿ ಕುರುಬ ಸಮುದಾಯ ನಿರ್ಮಾಣ ಮಾಡಿದ್ದ ಭಕ್ತಶ್ರೇಷ್ಠ ಕನಕದಾಸರ ಮೂರ್ತಿ ವಿರೂಪಗೊಳಿಸಿದ ಸ್ಥಳಕ್ಕೆ ತಹಸೀಲ್ದಾರ್ ಎಂ. ಕುಮಾರಸ್ವಾಮಿ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೆಲ ಕಿಡಿಗೇಡಿಗಳು ಮಂಗಳವಾರ ಮಧ್ಯರಾತ್ರಿ ಕನಕದಾಸ ಮೂರ್ತಿ ವಿರೂಪಗೊಳಿಸಿದ್ದಾರೆ. ಸ್ಥಳ ಪರಿಶೀಲನೆ ಬಳಿಕ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಕ್ರಮ ವಹಿಸುವಂತೆ ತಹಸೀಲ್ದಾರ್ ಸೂಚಿಸಿದರು.

ಪಿಡಿಒ ಪ್ರಕಾಶ್ ಹಿರೇಮಠ, ಕಂದಾಯ ಇಲಾಖೆ ಅಧಿಕಾರಿಗಳಾದ ಸಂಗಮ್ಮ, ದೊಡ್ಡನಗೌಡ, ಪೊಲೀಸ್ ಇಲಾಖೆ ಸಿಬ್ಬಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net