ರಾಮಾಯಣದ ಆದರ್ಶಗಳು ದಾರಿ ದೀಪ

SIRSI MV
Published on

ಶಿರಸಿ: ನೈತಿಕ ಮೌಲ್ಯಗಳು ಅಧಃಪತನವಾಗುತ್ತಿರುವ ಸಮಾಜದಲ್ಲಿ ನಮಗೆ ಮಹರ್ಷಿ ವಾಲ್ಮೀಕಿ ಬರೆದಿರುವ ರಾಮಾಯಣದ ಆದರ್ಶಗಳು ದಾರಿ ದೀಪವಾಗಿ ಕಾಣುತ್ತವೆ ಎಂದು ಉಪವಿಭಾಗಾಧಿಕಾರಿ ಕಾವ್ಯರಾಣಿ ಕೆ. ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ ಮತ್ತು ವಾಲ್ಮೀಕಿ ಸಮಾಜದಿಂದ ಗುರುವಾರ ಏರ್ಪಡಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸತ್ಯಕ್ಕೆ ಮಾರ್ಗದರ್ಶನ ತೋರುವ ರಾಮಾಯಣದ ಆದರ್ಶಗಳು ಜಗತ್ತಿನ ಎಲ್ಲ ಸಮಾಜಕ್ಕೂ ಆದರ್ಶ ಪ್ರಾಯವಾಗಿವೆ. ಈ ಹಿನ್ನೆಲೆಯಲ್ಲಿ ರಾಮಾಯಣ ಜಗತ್ತಿನ ಮಹಾನ್ ಕಾವ್ಯ ಎಂದರು.

ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಲಕ್ಷ್ಮೀ ಒಬಳೇಶ ಸಾಕೆಣ್ಣನವರ್, ವಿವೇಕ ಹನುಮಂತಪ್ಪ ತಳವಾರ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ರಕ್ಷಿತಾ ಶಾಂತಪ್ಪ ಬಡಣ್ಣನವರ್, ರಕ್ಷಿತಾ ಪರಶುರಾಮ ಬೇಡರ, ಪೂಜಾ ಮೋಹನ ಇಂಗಳಕಿ ಹಾಗೂ ಪದವಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಎಸ್.ಪಿ. ಹರ್ಷಿತಾ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದ ಎನ್‌ಎಸ್‌ಎಸ್ ಅಧಿಕಾರಿ ರೇವಣ್ಣ ಮಹದೇವ ನಾಯಕ ಹಾಗೂ ಅಬಕಾರಿ ಇಲಾಖೆಯ ಕಮಲಾ ಮಾರುತಿ ಮಲ್ಲೂರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ತಹಸೀಲ್ದಾರ್ ಶ್ರೀಧರ ಮುಂದಲಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಬಸಪ್ಪ ನಿಂಗಪ್ಪ ತಳವಾರ ಉಪನ್ಯಾಸ ನೀಡಿದರು. ಡಿವೈಎಸ್ಪಿ ಗಣೇಶ ಕೆ. ಎಲ್., ಪೌರಾಯುಕ್ತ ಕಾಂತರಾಜ, ಬಿಇಒ ನಾಗರಾಜ ನಾಯ್ಕ, ಪುಟ್ಟಸ್ವಾಮಿ ಬಿ. ಎಸ್.,ಉಮೇಶ ಬಂಕಾಪುರ ಇತರರು ಇದ್ದರು. ಕೇಶವಮೂರ್ತಿ ಎಚ್. ಇಮ್ಮಡಿ, ರಾಜೇಶ್ವರಿ ಮಡಿವಾಳ ನಿರ್ವಹಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ಹಳೇ ಬಸ್ ನಿಲ್ದಾಣದಿಂದ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ಮಾಡಲಾಯಿತು. ಕಲಾ ಭಾರತಿ ತಂಡದ ಮನೋಜ ಪಾಲೇಕರ ಹಾಗೂ ಇತರರು ವಾಲ್ಮೀಕಿ ರೂಪ ಧರಿಸಿ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net