ಮನೆಯಿಂದ ಹೊರಹೋದ ಪತಿ ನಾಪತ್ತೆ

ರವಿಕುಮಾರ್ ,_ನಾಪತ್ತೆ
ರವಿಕುಮಾರ್
Published on

ಕೊಳ್ಳೇಗಾಲ: ಪಟ್ಟಣದ ನಾಯ್ಡು ತೋಟದ ನಿವಾಸಿ ಮಹಿಳೆಯೊಬ್ಬರು ತನ್ನ ಪತಿ ನಾಪತ್ತೆಯಾಗಿರುವ ಬಗ್ಗೆ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ.

ರವಿಕುಮಾರ್ (45) ಕಾಣೆಯಾದ ವ್ಯಕ್ತಿ. ಈತ ಮೆಕ್ಯಾನಿಕಲ್ ಕೆಲಸ ಮಾಡಿಕೊಂಡಿದ್ದು, ಕಳೆದ 22 ವರ್ಷಗಳ ಹಿಂದೆ ಭಾರತಿ ಎಂಬುವರ ಜತೆ ವಿವಾಹವಾಗಿದ್ದರು. ಕಳೆದ ಸೆ.21 ರಂದು ಮನೆಯಲ್ಲಿ ಸಣ್ಣಪುಟ್ಟ ಮಾತುಕತೆ ನಡೆಯಿತು. ಅಂದು ಸಂಜೆ ಪತಿ ರವಿಕುಮಾರ್ ಮನೆಯಿಂದ ಹೊರ ಹೋದವರು ಬರಲಿಲ್ಲ. ಎಲ್ಲ ಕಡೆ ಹುಡುಕಾಡಿದರೂ ಸಿಗಲಿಲ್ಲ. ಹೀಗಾಗಿ ಅವರನ್ನು ಹುಡುಕಿಕೊಡಿ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ಕೊಳ್ಳೇಗಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net