ಮನೆಗೆ ಕನ್ನ ಹಾಕಿ ಚಿನ್ನಾಭರಣ ಕಳವು

Crime Logo
Published on

ಮೈಸೂರು: ವಿಜಯನಗರ ಬಡಾವಣೆಯ ಮನೆಯೊಂದರಲ್ಲಿ ಕಳ್ಳರು, ನಗದು ಸೇರಿದಂತೆ 1.4 ಲಕ್ಷ ರೂ. ವೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ. ವಿಜಯನಗರದ ನಿವಾಸಿ ಸ್ವರೂಪ್ ಅವರ ಮನೆಯಲ್ಲಿ ಕಳುವಾಗಿದೆ.

ಸ್ವರೂಪ್ ಅವರು ಕುಟುಂಬ ಸಮೇತ ಮೇ 3ರಂದು ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದಲ್ಲಿರುವ ದೇವಾಲಯಕ್ಕೆ ತೆರಳಿದ್ದರು. ಮಧ್ಯಾಹ್ನ ವಾಪಸ್ಸಾದ ವೇಳೆ ಅವರ ಮನೆಯ ಮುಂಬಾಗಿಲು ಮೀಟಿರುವುದು ಗಮನಕ್ಕೆ ಬಂದಿದೆ. ಮನೆಯ ಒಳಗೆ ತೆರಳಿ ನೋಡಿದ ವೇಳೆ ಕಳ್ಳರು ಅಲ್ಲಿದ್ದ 1.20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 20 ಸಾವಿರ ರೂ. ನಗದು ದೋಚಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸಂಬಂಧ ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net