ಆಸ್ಪತ್ರೆ ನಿರ್ಮಿಸದ್ದರಿಂದ ಭೂಮಿ ವಾಪಸ್

Kottur Land Return
ಹರಾಳು ನಂಜಪ್ಪ
Published on

ಕೊಟ್ಟೂರು: ಹರಾಳು ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ 15 ವರ್ಷದ ಹಿಂದೆ 70 ಸೇಂಟ್ಸ್ ಭೂಮಿ ದಾನ ನೀಡಲಾಗಿತ್ತು. ಆದರೆ, ಈವರೆಗೆ ಆಸ್ಪತ್ರೆ ನಿರ್ಮಿಸಿಲ್ಲ. ಹೀಗಾಗಿ ಭೂಮಿ ವಾಪಸ್ ಪಡೆಯಲು ನಿರ್ಧರಿಸಲಾಗಿದೆ ಎಂದು ಕೊಟ್ಟೂರು ಎಪಿಎಂಸಿ ಅಧ್ಯಕ್ಷ ಹರಾಳು ನಂಜಪ್ಪ ಹೇಳಿದರು.

ಪಟ್ಟಣದ ಎಪಿಎಂಸಿ ಕಚೇರಿಯಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಹರಾಳು ಹಿಂದುಳಿದ ಪ್ರದೇಶ ಹಾಗೂ ತಾಲೂಕು ಕೇಂದ್ರಕ್ಕೆ ದೂರದಲ್ಲಿದೆ. ಯಾರಿಗಾದರೂ ಆರೋಗ್ಯದಲ್ಲಿ ಏರುಪೇರಾದರೆ ಕೊಟ್ಟೂರಿಗೆ ಬರಬೇಕು. ಇದನ್ನು ಮನಗಂಡು, ಹಳ್ಳಿ ಜನರಿಗೆ ತಕ್ಷಣ ವೈದ್ಯಕೀಯ ಸೇವೆ ಸಿಗಬೇಕೆಂದು ದಾನ ಮಾಡಿದ್ದು ವ್ಯರ್ಥವಾಗಿದೆ.

ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ನನ್ನ ಮಗ ಅಪಘಾತದಲ್ಲಿ ಮೃತಪಟ್ಟ. ಅವನ ನೆನಪಿನಲ್ಲಿ ಭೂಮಿ ನೀಡಿದ್ದೆ. ಆದರೆ, ಈವರೆಗೆ ನಿರ್ಮಿಸಿಲ್ಲ. ಕಾರಣ ಗೊತ್ತಿಲ್ಲ. ಹೀಗಾಗಿ ಭೂಮಿ ಹಿಂಪಡೆಯಲು ನಿರ್ಧರಿಸಿದ್ದು, ಇದೇ ಸ್ಥಳವನ್ನು ಕಾಗಿನೆಲೆ ಪೀಠಕ್ಕೆ ವಸತಿ ಶಾಲೆ ನಿರ್ಮಿಸುವಂತೆ ಶ್ರೀಗಳಲ್ಲಿ ಕೋರುತ್ತೇನೆ ಎಂದ ಅವರು, ಹರಾಳು ಗ್ರಾಮದಲ್ಲಿ ನನ್ನ ಭೂಮಿ ಪಕ್ಕದಲ್ಲೇ ಸರ್ಕಾರದ ಒಂದೂವರೆ ಎಕರೆ ಜಾಗವಿದ್ದು, ಅಲ್ಲಿ ಪಿಎಚ್‌ಸಿ ನಿರ್ಮಿಸಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net