ವಚನಗಳಲ್ಲಿದೆ ಸಂವಿಧಾನದ ಆಶಯ

26 SHIROL 1
Published on

ಶಿರೋಳ: ಸಂವಿಧಾನದ ಎಲ್ಲ ಆಶಯಗಳು ಬಸವಾದಿ ಶಿವಶರಣರ ವಚನಗಳಲ್ಲಿ ಸಿಗುತ್ತವೆ. ವಚನ ಸಾಹಿತ್ಯದ ತಳಹದಿಯ ಮೇಲೆ ಸಂವಿಧಾನ ರಚನೆಯಾಗಿದೆ ಎಂದು ಭೈರನಹಟ್ಟಿ-ಶಿರೋಳ ತೋಂಟದಾರ್ಯ ಮಠದ ಶ್ರೀ ಶಾಂತಲಿಂಗ ಸ್ವಾಮೀಜಿ ಹೇಳಿದರು.

ಗ್ರಾಮದ ಮಾದಾರ ಚನ್ನಯ್ಯ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಶ್ರೀ ದೊರೆಸ್ವಾಮಿ ವಿರಕ್ತಮಠ ಭೈರನಹಟ್ಟಿ ಹಾಗೂ ಗುರುಬಸವ ಜನಕಲ್ಯಾಣ ಸಂಸ್ಥೆ, ಶ್ರೀ ತೋಂಟದಾರ್ಯ ಮಠ ಶಿರೋಳ ಮತ್ತು ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಅಂಗಸಂಸ್ಥೆಗಳು, ಗುರುಬಸವ ಪ್ರೌಢಶಾಲೆ, ಜಗದ್ಗುರು ತೋಂಟದಾರ್ಯ ಆಂಗ್ಲ ಮಾಧ್ಯಮ ಶಾಲೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಶಿರೋಳ ಗ್ರಾಪಂ ಅಧ್ಯಕ್ಷೆ ಹನಮವ್ವ ಹಿರೇಮನಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಅರುಣ ಕುಲಕರ್ಣಿ ಉಪನ್ಯಾಸ ನೀಡಿದರು. ಆರ್.ಕೆ. ಐನಾಪೂರ, ಹನುಮಂತಗೌಡ ತಿರಕನಗೌಡ್ರ, ಮಹಾಂತೇಶ ಹಿರೇಮಠ, ಎಸ್.ವಿ. ವಸ್ತ್ರದ, ಈರಣ್ಣ ಸೋನಾರ, ಪ್ರಕಾಶಗೌಡ ತಿರಕನಗೌಡ್ರ, ಬಸಣ್ಣ ಕುಪ್ಪಸ್ತ, ಸಂಗಣ್ಣ ಕಿತ್ತಲಿ, ಗಂಗಯ್ಯ ವಸ್ತ್ರದ, ಬಸವರಾಜ ಹೂಗಾರ, ಗುರುಬಸವ ಪ್ರೌಢಶಾಲೆ, ಮಾದಾರ ಚನ್ನಯ್ಯ ಕೈಗಾರಿಕಾ ತರಬೇತಿ ಸಂಸ್ಥೆಯ ಸಿಬ್ಬಂದಿ ಇದ್ದರು. ಎಸ್.ವಿ. ಕುಪ್ಪಸ್ತ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕಾಂತ ದೊಡಮನಿ ಸ್ವಾಗತಿಸಿದರು. ಎಸ್.ಎಂ. ಗಿರಿಯಪ್ಪಗೌಡ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಪ್ರಾಚಾರ್ಯ ಬಸವರಾಜ ಸಾಲಿಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net