ಅಪಾಯಕ್ಕೆ ಆಹ್ವಾನಿಸುತ್ತಿದೆ ಹೊಂಗೆ ಮರ

15-KGL-1,,,,,,,,,,,,
ಕೊಳ್ಳೇಗಾಲ ಪಟ್ಟಣದ ಚಂದ್ರಶೇಖರ್ ರಸ್ತೆಯಲ್ಲಿ ಬೆಳೆದಿರುವ ಹೊಂಗೆ ಮರದ ಕೊಂಬೆಗಳು ಕೇಬಲ್ ವೈಯರ್ ಹಾಗೂ ವಿದ್ಯುತ್ ತಂತಿ ಕಡೆಗೆ ವಾಲುತ್ತಿರುವುದು.
Published on

ಕೊಳ್ಳೇಗಾಲ: ಪಟ್ಟಣದ ಚಂದ್ರಶೇಖರ್ ರಸ್ತೆಯ ಬದಿಯಲ್ಲಿ ಬೆಳೆದಿರುವ ಹೊಂಗೆ ಮರವು ವಿದ್ಯುತ್ ತಂತಿಯ ಕಡೆಗೆ ವಾಲಿ, ಕೇಬಲ್ ವೈರ್‌ಗಳಿಗೆ ತಾಕುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಈ ಬಗ್ಗೆ ಸೆಸ್ಕ್ ಸಿಬ್ಬಂದಿ ವಿದ್ಯುತ್ ತಂತಿ ಹಾಗೂ ಕೇಬಲ್ ವೈರ್‌ಗಳಿಗೆ ಸ್ಪರ್ಶವಾಗದಂತೆ ಮರದ ಕೊಂಬೆಗಳನ್ನು ತೆರವುಗೊಳಿಸಬೇಕಿದೆ.

ಸೆಸ್ಕ್ ಸಿಬ್ಬಂದಿ ಇತ್ತ ಗಮನ ಹರಿಸಿ ಕೇಬಲ್ ವೈಯರ್‌ಗಳು ಹಾಗೂ ವಿದ್ಯುತ್ ತಂತಿಗಳಿಗೆ ಮರದ ರೆಂಬೆಗಳು ಸ್ಪರ್ಷವಾಗದಂತೆ ತೆರವುಗೊಳಿಸಲು ಕ್ರಮವಹಿಸಬೇಕು ಎಂದು ನಗರಸಭೆ ನಾಮನಿರ್ದೇಶಿತ ಸದಸ್ಯ ಸ್ವಾಮಿನಂಜಪ್ಪ ಒತ್ತಾಯಿಸಿದ್ದಾರೆ.

ಈ ಸಂಬಂಧ ಸೆಸ್ಕ್ ಎಇಇ ರಾಜು ಪ್ರಕ್ರಿಯಿಸಿ, ಹಲವೆಡೆ ವಿದ್ಯುತ್ ತಂತಿಗೆ ತಗಲುವ ಮರದ ಕೊಂಬೆಗಳನ್ನು ತೆರವುಗೊಳಿಸಲಾಗಿದೆ. ಚಂದ್ರಶೇಖರ್ ರಸ್ತೆಯಲ್ಲಿ ಕೆಲಸ ನಡೆದಿದೆ. ಇನ್ನು ಸಮಸ್ಯೆ ಇದ್ದರೆ ಪರಿಶೀಲಿಸಿ ಕ್ರಮವಹಿಸುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net