

ವಿಜಯಪುರ: ತ್ರಿವಿಧ ದಾಸೋಹದ ಮೂಲಕ ನಾಡಿನ ಜ್ಞಾನದೀಪವಾಗಿ ಬೆಳಗಿದ ಪುಣ್ಯ ಸಂತರು ಡಾ. ಶಿವಕುಮಾರ ಸ್ವಾಮಿಗಳು ಎಂದು ಡಾ. ವಿ.ಡಿ. ಐಹೊಳ್ಳಿ ಹೇಳಿದರು.
ನಗರದ ವೀರಶೈವ ಲಿಂಗಾಯತ ಸಾಂಸತಿಕ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಟಕದ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಶಿವಾನುಭವ ಗೋಷ್ಠಿಯಲ್ಲಿ ಶಿವಕುಮಾರ ಸ್ವಾಮಿಗಳ ಬದುಕು ಕುರಿತು ಅವರು ಮಾತನಾಡಿದರು.
ಶಿವಕುಮಾರ ಸ್ವಾಮಿಗಳು ಉದ್ದಾಲ ಶಿವಯೋಗಿಗಳ ಆೆಯಂತೆ ಸತ್ಯವಾಗಿ ನಡೆದು ತೋರಿಸಿದ ಪೂಜ್ಯರು. ಅವರ ಜೀವನ ಸಂದೇಶಗಳಲ್ಲಿ ಮುಖ್ಯವಾದದ್ದು ದಾಸೋಹ. ಅವರು ಜೀವನವೀಡಿ ದಾಸೋಹ ಪ್ರೆಯ ಪ್ರತಿಕರಾಗಿದ್ದರು. ಹಸಿದ ಹೊಟ್ಟೆಗಳಿಗೆ ಪ್ರೀತಿಯಿಂದ ಉಣಬಡಿಸುವುದು ಅವರ ತತ್ವವಾಗಿತ್ತು. ಏಕೆಂದರೆ ಹಸಿದ ಹೊಟ್ಟೆಗೆ ಶಿವಭಕ್ತಿ ತಲುಪದು ಎಂಬುದು ಅವರ ನಿಲುವಾಗಿತ್ತು ಎಂದರು.
ನಿರ್ದೇಶಕ ಎಂ.ಎಂ. ಅವರಾದಿ ಮಾತನಾಡಿ, ಸಿದ್ಧಗಂಗಾ ಶ್ರೀಗಳು ಬಸವಣ್ಣನವರ ತತ್ವಾದರ್ಶಗಳನ್ನು ಕಾಯಾ, ವಾಚಾ, ಮನಸಾ ಪಾಲಿಸಿದವರು ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ, ದೇಶದ ಸಂಸತಿ ಜನಮನದಲ್ಲಿ ಬಿತ್ತಲು ಮಠಾಧೀಶರು ಮುಂದಾಗಿದ್ದರು. ಸಮಾಜದ ಸುಧಾರಣೆ ಶೈಕ್ಷಣಿಕ ಏಳಿಗೆಗಾಗಿ ಮನಸ್ಸನ್ನು ಹೊಂದುವ ಕಾರ್ಯ ಮಠಗಳು ಮಾಡಿದ್ದು, ಅದರಲ್ಲಿ ತುಮಕೂರು ಸಿದ್ಧಗಂಗಾ ಮಠ ಮೊದಲಾಗಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಬಿ.ಟಿ. ಈಶ್ವರಗೊಂಡ ಸ್ವಾಗತಿಸಿದರು. ಸಾಹಿತಿ ಸಂಗಮೇಶ ಬದಾಮಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧ್ಯಕ್ಷ ಎಂ.ಜಿ. ಯಾದವಾದ ವಂದಿಸಿದರು.
ಸಹದೇವ ನಾಡಗೌಡರ, ಗುರುಲಿಂಗಪ್ಪ ಬಿರಾದಾರ, ಡಾ. ರಮೇಶ ತೇಲಿ, ಬಿ.ಡಿ. ಪಟ್ಟಣಶೆಟ್ಟಿ, ಶಾರದಾ ಕೊಪ್ಪ, ಭೀಮಣ್ಣ ಭಜಂತ್ರಿ, ರವೀಂದ್ರ ಬ್ಯಾಕೋಡ, ಮಲ್ಲಿಕಾರ್ಜುನ ಅಮರಣ್ಣವರ, ಮಹಾದೇವ ಹಾಲಳ್ಳಿ, ಎಸ್.ಎನ್. ಶಿವಣಗಿ, ಡಾ. ಸಂಗಮೇಶ ಮೇತ್ರಿ, ವಿಠಲ ತೇಲಿ, ಜಗದೀಶ ಮೋಟಗಿ, ಚಿದಾನಂದ ಪೋಳ ಮತ್ತಿತರರಿದ್ದರು.