ರಂಗ ಪರಂಪರೆ ಇತಿಹಾಸ ದೊಡ್ಡದು

The history of theater heritage is vast.
The history of theater heritage is vast.
Published on

ಇಳಕಲ್ಲ (ಗ್ರಾ): ಜಗತ್ತಿನ ಮತ್ತು ಭಾರತದ ರಂಗಭೂಮಿಗೆ ಭವ್ಯ ಇತಿಹಾಸವಿದೆ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಇಲ್ಲಿನ ಕಂಠಿ ಸರ್ಕಲ್‌ನಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಮತ್ತು ಸ್ನೇಹರಂಗದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದ ರಂಗ ಪರಂಪರೆ ಅತ್ಯಂತ ದೊಡ್ಡದಿದೆ. ಗುಬ್ಬಿ ವೀರಣ್ಣರಂತಹ ಮಹಾನ್ ಕಲಾವಿದರು. ಈ ಭೂಮಿಯಿಂದ ಬಂದವರಾಗಿದ್ದಾರೆ ಎಂದು ಹೇಳಿದರು.

ಗುರುಮಹಾಂತಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ಸ್ನೇಹರಂಗದ ಅಧ್ಯಕ್ಷ ಬಸವರಾಜ ಮಠದ ವಹಿಸಿದ್ದರು. ಇದೇ ಸಮಯದಲ್ಲಿ ಶೂದ್ರ ಸಂಹಾರ ಎಂಬ ಬೀದಿ ನಾಟಕದ ಪ್ರದರ್ಶನ ಮಾಡಲಾಯಿತು.

ವಿಶ್ವನಾಥ ವಂಶಾಕೃತಮಠ, ಕೆ.ಎ.ಬನ್ನಟ್ಟಿ, ಮಹಾಂತೇಶ ಗಜೇಂದ್ರಗಡ, ಚಂದ್ರಶೇಖರ ಶಾಸೀ, ಢಗಳಚಂದ್ರ ಪವಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net