ಕಿತ್ತೂರ ಸಂಸ್ಥಾನದ ಇತಿಹಾಸಕ್ಕಿದೆ ಭಿನ್ನವಾದ ಚರಿತ್ರೆ

16 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಭಾರತದ ಇತಿಹಾಸದಲ್ಲಿ ಕಿತ್ತೂರ ಸಂಸ್ಥಾನದ ಇತಿಹಾಸವು ಭಿನ್ನವಾದ ಚರಿತ್ರೆ ಹೊಂದಿದೆ. ಕಿತ್ತೂರಿನ ಚರಿತ್ರೆಯು ಅಲ್ಲಿಯ ಜನರ ಚರಿತ್ರೆಯ ಒಂದು ಭಾಗವಾಗಿದೆ ಎಂದು ಪುಣೆಯ ಡಾ. ಶಶಿಕಾಂತ ಪಟ್ಟಣ ಅಭಿಪ್ರಾಯಪಟ್ಟರು.

ಕರ್ನಾಟಕ ವಿದ್ಯಾವರ್ಧಕ ಸಂಘವು ದೊಡ್ಡಭಾವೆಪ್ಪ ಮೂಗಿ ಬೈಲಹೊಂಗಲ ಸ್ಮರಣಾರ್ಥ ದತ್ತಿ ಅಂಗವಾಗಿ ಇತ್ತೀಚೆಗೆ ಏರ್ಪಡಿಸಿದ್ದ ಕಿತ್ತೂರು ಇತಿಹಾಸದ ಬಿಚ್ಚಿಟ್ಟ ಸತ್ಯ ಕೃತಿ ಬಿಡುಗಡೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ ಭಾರತದ ಪ್ರಪ್ರಥಮ ವೀರರಾಣಿ. ಆದರೆ ವಿಪುಲ ಆಧಾರ ಹಾಗೂ ಸಮಗ್ರತೆಯ ಕೊರತೆಯಿಂದ ಕಿತ್ತೂರಿನ ಇತಿಹಾಸ ಸಮಗ್ರವಾಗಿ ದೊರೆತಿರಲಿಲ್ಲ. ಬೈಲಹೊಂಗದ ದೊಡ್ಡಭಾವೆಪ್ಪ ಮೂಗಿಯವರು ಇತಿಹಾಸದ ಕಾಲ ಗರ್ಭದಲ್ಲಿ ಮರೆಯಾಗಿ ಹೋಗುತ್ತಿದ್ದ ಕಿತ್ತೂರಿನ ಇತಿಹಾಸದ ಬಗ್ಗೆ ದಾಖಲೆ, ಪುರಾವೆ ಸಂಗ್ರಹಿಸಿ ಕಿತ್ತೂರ ಇತಿಹಾಸದ ಬಿಚ್ಚಿಟ್ಟ ಸತ್ಯ ಕೃತಿ ಸಂಪಾದನೆ ಮಾಡಿದ್ದಾರೆ ಎಂದರು.

ಸವಿತಾ ದೇಶಮುಖ ಕೃತಿ ಕುರಿತು, ಬೆಳಗಾವಿ ಜಿಪಂ ಮಾಜಿ ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿದರು. ಡಾ. ವಿಶ್ವನಾಥ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿ ಪ್ರಕಾಶ ಮೂಗಿ ದತ್ತಿ ಆಶಯ ಕುರಿತು ಮಾತನಾಡಿದರು.

ಸತೀಶ ತುರಮರಿ, ರಾಜೇಂದ್ರ ಸಾವಳಗಿ, ಸಿ.ಎಸ್​. ಪಾಟೀಲ, ನಿಂಗಣ್ಣ ಕುಂಟಿ, ಎಸ್​.ಡಿ. ಮರೇದ, ಎನ್​.ಜಿ. ಕರಿಕಟ್ಟಿ, ಅಶೋಕ ಚಿಕ್ಕೋಡಿ, ಗದಿಗೆಯ್ಯ ಹಿರೇಮಠ, ಎಸ್​.ಕೆ. ಕುಂದರಗಿ, ಡಾ. ಮೃತ್ಯುಂಜಯ ಶೆಟ್ಟರ, ಶಂಕರಲಿಂಗ ಶಿವಳ್ಳಿ, ಮೂಗಿ ಪರಿವಾರದವರು, ಇತರರು ಇದ್ದರು.

ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net