ಮಹಾತ್ಮರ ಚರಿತ್ರೆ ಓದಬೇಕು

1Rayabag2
Published on

ರಾಯಬಾಗ: ವಿದ್ಯಾರ್ಥಿಗಳು ಮಹಾತ್ಮರ ಜೀವನ ಚರಿತ್ರೆ ಓದುವ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಆರ್‌ವಿಆರ್ ಪಿಯು ಕಾಲೇಜು ಪ್ರಾಚಾರ್ಯ ಪಿ.ಎಂ.ಭೆಂಡೆ ಹೇಳಿದರು.

ಪಟ್ಟಣದ ಆನಂದಿಬಾಯಿ ಬಾಲಕಿಯರ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ಮತ್ತು 8ನೇ ವರ್ಗದ ವಿದ್ಯಾರ್ಥಿನಿಯರ ಸ್ವಾಗತ ಸಮಾರಂಭದಲ್ಲಿ ಮಾತನಾಡಿ, ನಿರಂತರ ಕಲಿಕೆ, ಸತತ ಪ್ರಯತ್ನ, ಕಠಿಣ ಪರಿಶ್ರಮದಿಂದ ಸಾಧನೆ ಮಾಡಲು ಸಾಧ್ಯ ಎಂದರು.

ಎಸ್‌ಪಿಎಂ ಕಾರ್ಯದರ್ಶಿ ಎಸ್.ಎಸ್.ಸಿಂಗಾಡಿ ಮಾತನಾಡಿ, ಈ ಭಾಗದ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಅಬಾಜಿಯವರು ಬಾಲಕಿಯರಿಗಾಗಿ ಪ್ರೌಢಶಾಲೆ ಪ್ರಾರಂಭಿಸಿದ್ದರು ಎಂದು ತಿಳಿಸಿದರು.

ಸಂಸ್ಥೆ ನಿರ್ದೇಶಕಿ ಭಾಗ್ಯಶ್ರೀ ಪಾಟೀಲ, ಪ್ರಾಚಾರ್ಯ ಬಿ.ಎಸ್.ಶಿಂಗೆ, ಆರ್.ಎಸ್.ಗುಡೋಡಗಿ, ಎಚ್.ಎಸ್.ಲತಿಫ, ಜೆ.ಡಿ.ಕೆಳಗಡೆ, ಸರಿತಾ ಪುಟಾಣಿ, ಕೀರ್ತಿ ತೇಲಿ, ಪಿ.ಎಸ್.ಖೋತ, ಡಿ.ಸಿ.ಮಗದುಮ್ಮ, ಎ.ಕೆ.ಬಾನಜ, ಸಂತೋಷ ಅವಳೆ, ಸುಶ್ಮಿತಾ ಮನೋಜ, ದೀಪಾ ವಂಟಮೂರೆ, ಭಾರತಿ ಕಟ್ಟೆನ್ನವರ, ಸೀಮಾ ಕೊಟ್ರೆ, ಅಶ್ವಿನಿ ಹುಚ್ಚನ್ನವರ, ಶಿಕ್ಷಕಿ ಡಿ.ಸಿ.ಮಗದುಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net