ಹಿಂದು ಮಹಾಗಣಪತಿ ಶೋಭಾಯಾತ್ರೆ ಅದ್ದೂರಿ

09 09 205_BNG_RURAL_PAGE_02
ನೆಲಮಂಗಲದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದು ಮಹಾಗಣಪತಿ ಶೋಭಾಯಾತ್ರೆ ಅದ್ದೂರಿಯಾಗಿ ನೆರವೇರಿಸಲಾಯಿತು. ಶ್ರೀ ಸಿದ್ದಲಿಂಗಸ್ವಾಮೀಜಿ, ವಿಶ್ವಹಿಂದು ಪರಿಷತ್​ ಜಿಲ್ಲಾ ಉಪಾಧ್ಯಕ್ಷ ಎಂ.ಎನ್​.ರಾಮು, ಮೇಲಣಗವಿ ಮಠದ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ವನಕಲ್ಲು ಮಠದ ಶ್ರೀ ಬಸವರಮನಂದ ಸ್ವಾಮೀಜಿ, ಹಿಂದು ಮಹಾಗಣಪತಿ ಸ್ವಾಗತ ಸಮಿತಿ ಅಧ್ಯಕ್ಷ ಮಧುಸೂದನ್​, ವಿಶ್ವ ಹಿಂದು ಪರಿಷತ್​ ಕಾರ್ಯಕಾರಣಿ ಸದಸ್ಯ ಶಶಿಕಿರಣ್​, ಪುರಸಭೆ ಮಾಜಿ ಅಧ್ಯಕ್ಷ ರವಿ ಇದ್ದರು.
Published on

ನೆಲಮಂಗಲ : ನಗರದಲ್ಲಿ ಮೊದಲ ಬಾರಿಗೆ ಪ್ರತಿಷ್ಠಾಪಿಸಿದ್ದ ಹಿಂದು ಮಹಾಗಣಪತಿಯನ್ನು ಅದ್ದೂರಿ ಶೋಭಾಯಾತ್ರೆ ಮೂಲಕ ವಿಸರ್ಜನೆ ಮಾಡಲಾಯಿತು. ನಗರದ ಹಿಪ್ಪೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಯಾಗಿದ್ದ ಹಿಂದು ಮಹಾಗಣಪತಿಯನ್ನು ಹೂವಿನ ಪಲ್ಲಕ್ಕಿಯಲ್ಲಿ ಪೇಟೆಬೀದಿ ಮೂಲಕ ಬಸ್​ನಿಲ್ದಾಣ, ಟಿ.ಬಿ.ಬಸ್​ ನಿಲ್ದಾಣ, ವಿವರ್ಸ್​ ಕಾಲನಿಯ ಮೂಲಕ ಗೋಪಿ ವೆಂಕಟೇಶ್ವರದ ಬಳಿಯವರೆಗೂ ಮೆರವಣಿಗೆ ಮಾಡಿ ನಗರಸಭೆಯಿಂದ ನಿರ್ಮಾಣ ಮಾಡಿದ್ದ ತೊಟ್ಟಿಯಲ್ಲಿ ವಿಸರ್ಜನೆ ಮಾಡಲಾಯಿತು. ನೂರಾರು ಮಂದಿ ಹಿಂದೂ ಕಾರ್ಯಕರ್ತರು ಶೋಭಾ ಯಾತ್ರೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಶೋಭಾಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಬಸವಣ್ಣ ದೇವರ ಮಠದ ಸಿದ್ದಲಿಂಗ ಸ್ವಾಮೀಜಿ, ಶೋಭಾಯಾತ್ರೆಗೆ ಜನರು ಸ್ವ&ಇಚ್ಛೆಯಿಂದ ಭಾಗವಹಿಸಬೇಕಾಗಿದೆ. ಈ ವರ್ಷ ಆರಂಭವಾಗಿರುವ ಹಿಂದು ಮಹಾಗಣಪತಿ ಪ್ರತಿಷ್ಠಾಪನೆ ಹಾಗೂ ಶೋಭಾಯಾತ್ರೆ ಅದ್ದೂರಿಯಾಗಿ ನಡೆದಿದ್ದು, ಮುಂದಿನ ವರ್ಷಗಳಲ್ಲಿ ಮನೆಮನೆಗಳಿಂದಲೂ ಜನರು ಶೋಭಯಾತ್ರೆಗೆ ಬರುವಂತೆ ಆಗಲಿ ಎಂದರು.

ಸ್ವಾತಂತ್ರ$್ಯ ಹೋರಾಟದಲ್ಲಿ ಗಣೇಶೋತ್ಸವ ಜನರನ್ನು ಜಾಗೃತಗೊಳಿಸಿದರೆ, ಪ್ರಸ್ತುತ ಸಮಾಜದಲ್ಲಿ ಹಿಂದುಗಳನ್ನು ಜಾಗೃತಗೊಳಿಸಲು ಹಿಂದು ಮಹಾ ಗಣಪತಿ ಅನಿವಾರ್ಯವಾಗಿದೆ ಎಂದು ತಿಳಸಿದರು.

ವಿಶ್ವಹಿಂದು ಪರಿಷತ್​ ಜಿಲ್ಲಾ ಉಪಾಧ್ಯಕ್ಷ ಎಂ.ಎನ್​.ರಾಮು ಮಾತನಾಡಿ, ಹಿಂದು ಮಹಾಗಣಪತಿ ಪೂಜೆಗೆ ನೆಲಮಂಗಲ ತಾಲೂಕಿನ ವಿವಿಧ ಮಠದ ಸ್ವಾಮೀಜಿಗಳು, ಶಾಸಕ ಎನ್​.ಶ್ರೀನಿವಾಸ್​, ಮಾಜಿ ಶಾಸಕ ಎಂ.ವಿ.ನಾಗರಾಜು, ಮುಖಂಡ ಸಪ್ತಗಿರಿ ಶಂಕರ್​ ನಾಯಕ್​ ಭಾಗವಹಿಸಿ ಹಿಂದು ಮಹಾಗಣಪತಿ ದರ್ಶನ ಪಡೆದಿದ್ದಾರೆ ಎಂದರು. ಕನ್ನಡಾಂಬೆ ಯುವಕರ ಸಂದ ಮೋಹನ್​ ಕುಮಾರ್​. ಕಾರ್ಯದರ್ಶಿ ದೀತ್​, ಉಪಾಧ್ಯಕ್ಷ ರತ್​, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಮಣಿಗೌಡ, ಮಹಿಳಾ ಮೋರ್ಚಾ ಮಂಜುಳಾ ಸುರೇಶ್​, ಮುಖಂಡರಾದ ನಾಗೇಶ್​, ಸೀತಾರಾಮು, ರಾಜಮ್ಮ, ಸೌಮ್ಯ, ಸುಮ, ಕೇಶವಮೂರ್ತಿ ಸೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net