ಹಿಂದು ಮಹಾಗಣಪತಿ ಶೋಭಾಯಾತ್ರೆ ಸಂಪನ್ನ

FotoJet (1)
Published on

 ಪಾವಗಡ : ಪಟ್ಟಣದ ಮಧುಗಿರಿ ಊರ ಬಾಗಿಲಿನ ಅರಳಿಕಟ್ಟೆ ಬಳಿ ವಿಶ್ವ ಹಿಂದು ಪರಿಷತ್​ ಹಾಗೂ ಬಜರಂಗದಳದಿಂದ ಪ್ರತಿಷ್ಠಾಪಿಸಿದ್ದ ಹಿಂದು ಮಹಾಗಣಪತಿ ವಿಸರ್ಜನಾ ಮೆರವಣಿಗೆ ಭಾನುವಾರ ಅದ್ದೂರಿಯಾಗಿ ನಡೆಯಿತು.

ಶೋಭಾಯಾತ್ರೆಗೆ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಜಪಾನಂದ ಸ್ವಾಮೀಜಿ ಚಾಲನೆ ನೀಡಿದರು. ನಂತರ ಬಿಜೆಪಿ ಮುಖಂಡ ಡಾ.ಜಿ.ವೆಂಕಟರಾಮಯ್ಯ ಮಾತನಾಡಿ, ಹಿಂದು ಸಮಾಜದ ಜಾಗೃತಿಗಾಗಿ ಇಂತಹ ಆಚರಣೆಗಳು ಜಾರಿಗೆ ಬಂದಿದ್ದು, ನಮ್ಮ ಧರ್ಮದ ಆಚಾರ ವಿಚಾರ ಹಾಗೂ ಸಂಸತಿಯನ್ನ ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ. ಮುಂದಿನ ಯುವ ಪೀಳಿಗೆ ಧರ್ಮ ಜಾಗೃತಿ ಹಾಗೂ ಹಿಂದು ಸಮಾಜವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಲು ಇಂತಹ ಕಾರ್ಯಕ್ರಮ ಅವಶ್ಯ ಎಂದರು.

ಹಿಂದು ಮಹಾಗಣಪತಿ ಮೆರವಣಿಗೆಯು ಭಾನುವಾರ 11 ಗಂಟೆಗೆ ನಾಗರಕಟ್ಟರಯಿಂದ ಪ್ರಾರಂಭವಾಗಿ ತುಮಕೂರು ರಸ್ತೆಯ ಕಣಿವೇನಹಳ್ಳಿ ವಿಸರ್ಜನಾ ಸ್ಥಳಕ್ಕೆ ತೆರಳಿ ಗೌರವಯುತವಾಗಿ ವಿಸರ್ಜಿಸಲಾಯಿತು.

ಯುವಕರು,ಯುವತಿಯರು ಹಾಗೂ ಹಿಂದು ಕಾರ್ಯಕರ್ತುರು ನಾಸಿಕ್​ ಡೋಲ್​, ವೀರಗಾಸೆ, ಕೋಲಾಟಕ್ಕೆ ಕುಣಿದು ಕಪ್ಪಳಿಸಿದರು. ರಾಜಬೀದಿಯುದ್ದಕ್ಕೂ ವಿಶೇಷ ಅಲಂಕಾರ ಮಾಡಲಾಗಿತ್ತು. ಮೆರವಣಿಗೆ ಶೋಭಾಯಾತ್ರೆಯಲ್ಲಿ ಸಾವಿರಾರು ಹಿಂದು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಕುಟುಂಬ ಸಮೇತ ಆಗಮಿಸಿದ್ದರು.

ವಿಶ್ವ ಹಿಂದು ಪರಿಷತ್​, ಬಜರಂಗದಳ ಹಾಗೂ ಶ್ರೀರಾಮಸೇನೆ ಸೇರಿದಂತೆ ವಿವಿಧ ಹಿಂದು ಸಂಘಟನೆಗಳ ಮುಖಂಡರು, ಹಿಂದು ಕಾರ್ಯಕರ್ತರು ಹಾಗೂ ಪಟ್ಟಣದ ಯುವಕ, ಯುವತಿಯರು, ಸಾರ್ವಜನಿಮರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net