

ಕಲಘಟಗಿ: ಮಹರ್ಷಿ ವಾಲ್ಮೀಕಿಯಂತಹ ಮಹನೀಯರ ಆದರ್ಶಗಳನ್ನು ಪಾಲಿಸಿ ಬದುಕಿನಲ್ಲಿ ಬದಲಾವಣೆ ಕಂಡುಕೊಳ್ಳಬೇಕು ಎಂದು ತಹಸೀಲ್ದಾರ್ ಬಸವರಾಜ ಹೊಂಕಣದವರ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ, ತಾಲೂಕು ಪಂಚಾಯಿತಿ ಹಾಗೂ ತಾಲೂಕು ಆಡಳಿತ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಾಲ್ಮೀಕಿಯವರು ಋಷಿ ನಾರದರ ಉಪದೇಶಾಮೃತದಿಂದ ಜ್ಞಾನೋದಯ ಪಡೆದುಕೊಂಡು, ಜಗತ್ತಿಗೆ ರಾಮಾಯಣ ಮಹಾಕಾವ್ಯವನ್ನು ಪರಿಚಯಿಸಿದರು. ಕೇವಲ ಒಂದೇ ಕುಲಕ್ಕೆ ಸೀಮಿತವಾಗದೆ ಇಡೀ ಮನುಕುಲದ ಉದ್ಧಾರಕ್ಕೆ ಸಾಕ್ಷಿಯಾಗಿದ್ದಾರೆ ಎಂದರು.
ಪಿಡಿಒ ಪುಂಡಲೀಕ ಯಲ್ಲಾರಿ ಮಾತನಾಡಿದರು. ತಾಪಂ ಇಒ ಪಿ.ವೈ. ಸಾವಂತ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅನುಷಾ ಹಿರೇಮಠ, ಪಿಎಸ್‌ಐ ಚಿದಾನಂದ ಕರಿವೀರಪ್ಪನವರ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಅಣ್ಣಪ್ಪ ಓಲೆಕಾರ, ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಫಕೀರಗೌಡ ದೊಡ್ಡಮನಿ, ಭೀಮಣ್ಣ ಬ್ಯಾಡರಕೊಪ್ಪ, ಫಕೀರೇಶ ಅಪ್ಪಣ್ಣವರ, ರಮೇಶ ಸೋಲಾರಗೋಪ್ಪ, ರಾಮಣ್ಣ ವಾಲಿಕಾರ, ಶೇಖಪ್ಪ ಮಲಕನಕೊಪ್ಪ, ನಾಗಪ್ಪ ಅಜ್ಜನವರ, ಲಕ್ಷ್ಮಣ ಮ್ಯಾಗಿನಮನಿ, ಹೊಳೆಪ್ಪ ಗಾಮಣ್ಣವರ, ಚಂದ್ರು ತಳವಾರ, ನಾಗಪ್ಪ ಕನಕಪ್ಪನವರ, ಮಹಾದೇವ ಹೊರಕೇರಿ, ಪರಶುರಾಮ್ ಸುತಗಟ್ಟಿ, ವಿರೂಪಾಕ್ಷಿ ಮದ್ನೂರ, ಶಿವಾಜಿ ವಡ್ಡರ, ಮಂಗಪ್ಪ ಲಮಾಣಿ, ಶಶಿಕುಮಾರ್ ಕಟ್ಟಿಮನಿ, ಉದಯ್ ಗೌಡರ್, ಬಸವರಾಜ ಕಟ್ಟಿಮನಿ, ಹನುಮಂತ ಹರಿಜನ, ಇತರರಿದ್ದರು.
ಕಲಘಟಗಿ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಬೆಳಗ್ಗೆ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಿ, ವಾಲ್ಮೀಕಿ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.