ಮಾನವೀಯ ಕಾನೂನಿನ ಹೃದಯ ‘ಜಿನಿವಾ ಒಪ್ಪಂದ’- ಪ್ರೊ.ಎಸ್. ಪ್ರದೀಪ್‌ಕುಮಾರ

JINEVA DAY IN BLDE SB COLLEGE
ವಿಜಯಪುರ ನಗರದ ಬಿಎಲ್ಡಿಇ ಸಂಸ್ಥೆಯ ಎಸ್‌ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಜಾಗತಿಕ ಜಿನಿವಾ ಸಮಾವೇಶ ದಿನಾಚರಣೆ’ಯಲ್ಲಿ ಅಂಜುಮನ್ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಎಸ್. ಪ್ರದೀಪ್‌ಕುಮಾರ ಮಾತನಾಡಿದರು.
Published on

ವಿಜಯಪುರ: ಜಿನೀವಾ ಒಪ್ಪಂದಗಳು ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಹೃದಯವಾಗಿದ್ದು, ಸಶಸ್ತ್ರ ಸಂಘರ್ಷಗಳ ನಡವಳಿಕೆಯನ್ನು ನಿಯಂತ್ರಿಸಿ, ಅದರ ಪರಿಣಾಮಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತವೆ ಎಂದು ಅಂಜುಮನ್ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಎಸ್. ಪ್ರದೀಪ್‌ಕುಮಾರ ಹೇಳಿದರು.

ನಗರದ ಬಿಎಲ್ಡಿಇ ಸಂಸ್ಥೆಯ ಎಸ್.ಬಿ. ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಮತ್ತು ರೆಡ್ ಕ್ರಾಸ್ ಸೆಲ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಜಾಗತಿಕ ಜಿನಿವಾ ಸಮಾವೇಶ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

ವಿಶ್ವ ಜಿನಿವಾ ಒಪ್ಪಂದ ದಿನವನ್ನು ಪ್ರತಿವರ್ಷ ಆಗಸ್ಟ್ 12 ರಂದು ಆಚರಿಸಲಾಗುತ್ತದೆ. ಇದು 1949ರಲ್ಲಿ ಅಂಗೀಕರಿಸಲ್ಪಟ್ಟ ಜಿನಿವಾ ಒಪ್ಪಂದಗಳ ವಾರ್ಷಿಕೋತ್ಸವವನ್ನು ಗುರುತಿಸುತ್ತದೆ. ಇವು ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಮೂಲ ಒಪ್ಪಂದಗಳಾಗಿದ್ದು, ಸಶಸ್ತ್ರ ಸಂಘರ್ಷದ ಸಮಯದಲ್ಲಿ ಹೋರಾಟದಲ್ಲಿ ಭಾಗವಹಿಸದ ಜನರನ್ನು ರಕ್ಷಿಸುವ ಉದ್ದೇಶ ಹೊಂದಿವೆ ಎಂದರು.

ಜಿನಿವಾ ಒಪ್ಪಂದವು ಯುದ್ಧದ ಕ್ರೂರತೆಯನ್ನು ತಗ್ಗಿಸಿ ಮಾನವೀಯತೆ ಕಾಪಾಡುವ ಜಾಗತಿಕ ಒಪ್ಪಂದವಾಗಿದೆ. ಯುದ್ಧದಲ್ಲಿ ಜಯಪರಾಜಯಕ್ಕಿಂತ ಮಾನವೀಯ ಮೌಲ್ಯಗಳೇ ಮುಖ್ಯ ಎಂದು ಹೇಳಿದರು.

ಉಪಪ್ರಾಚಾರ್ಯ ಡಾ.ಅನೀಲ ಬಿ. ನಾಯಕ, ಯುಥ್ ರೆಡ್ ಕ್ರಾಸ್ ಮುಖ್ಯಸ್ಥ ಡಾ.ಅನಿಲ್ ಆರ್. ಪಾಟೀಲ ಸ್ವಾಗತಿಸಿದರು. ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net