ಸಾಧನೆಯ ಹಿಂದಿದೆ ಗುರುಗಳ ಶ್ರಮ

13HARUGERI5
Published on

ಹಾರೂಗೇರಿ: ಬದಲಾಗುತ್ತಿರುವ ಶೈಣಿಕ ಒತ್ತಡಗಳ ನಡುವೆಯೂ ಮಕ್ಕಳಿಗೆ ಅರ ಜ್ಞಾನ ನೀಡುವ ಗುರುಗಳ ಶ್ರಮ ಮಹತ್ತರವಾದುದು ಎಂದು ಶಿಕ್ಷಕ ಎಸ್​.ಬಿ.ಮುನ್ನೋಳಿ ಹೇಳಿದರು.

ಪಟ್ಟಣದ ಜ್ಞಾನಗಂಗೋತ್ರಿ ಪ್ರಾಥಮಿಕ ಶಾಲೆ ಮತ್ತು ಶ್ರೀ ಪದ್ಮಾವತಿ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಜ್ಞಾನದ ಧಾರೆಯೆರೆದು ಬದುಕು ಕಟ್ಟಿಕೊಟ್ಟ ಗುರುವಿನ ಕಾರ್ಯ ಶ್ಲಾನೀಯ ಎಂದರು.

ವಿಶ್ರಾಂತ ಅಧ್ಯಾಪಕ ಡಾ.ಚಂದ್ರಶೇಖರ ಗುಡಸಿ ಮಾತನಾಡಿ, ಬದಲಾಗುತ್ತಿರುವ ಶೈಣಿಕ ವ್ಯವಸ್ಥೆಗೆ ಶಿಕರೆ ಹೊಂದಿಕೊಳ್ಳಬೇಕಿದೆ. ದಾರಿ ತಪು$್ಪತ್ತಿರುವ ಇಂದಿನ ಯುವಪೀಳಿಗೆಗೆ ಸನ್ಮಾರ್ಗ ಗುರಿ ತೋರುತ್ತಿಲ್ಲ. ಅದಕ್ಕಾಗಿ ಶಿಣದೊಂದಿಗೆ ಸಂಸ್ಕಾರವೂ ಮುಖ್ಯ ಎಂದರು. ಸಂಸ್ಥಾಪಕ ಅಧ್ಯ ಎಸ್​.ಎ.ದಟವಾಡ ಮಾತನಾಡಿದರು.

ಮುಖ್ಯಶಿಕ್ಷಕ ಆರ್​.ಎಸ್​.ಜಾಧವ ಮಾತನಾಡಿದರು. ಸಂಸ್ಥೆ ಕಾರ್ಯದರ್ಶಿ ಪ್ರಮಥ ದಟವಾಡ, ವಿಜಯ ಹಂಜೆ, ಶಾರದಾ ಅಂಗಡಿ, ಎಂ.ಎಸ್​.ಪಾಟೀಲ, ಎಸ್​.ಬಿ.ಮೇಕನಮರಡಿ, ಪಿ.ಎಸ್​.ಹಿಪ್ಪರಗಿ ಇತರರಿದ್ದರು. ಶಿಕ ಎಂ.ಎಸ್​.ಬಳವಾಡ ಸ್ವಾಗತಿಸಿದರು. ಭಾಗ್ಯಶ್ರೀ ಹಂಜೆ ನಿರೂಪಿಸಿದರು. ಆರ್​.ಎ.ಅಸ್ಕಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net