ವಿಶ್ವಮಾನವತೆ ಪ್ರತಿಪಾದಿಸಿದ ಗುರುಗಳು: ಸ್ಮಿತೇಶ್ ಎಸ್.ಬಾರ್ಯ ಪ್ರತಿಪಾದನೆ

Published on

ಬಂಟ್ವಾಳ: ದೇವರ ಸೃಷ್ಟಿ, ಸರ್ವಜೀವಗಳಲ್ಲಿ ಸಮಾನತೆಯನ್ನೂ, ವಿಶ್ವಮಾನವತೆಯನ್ನೂ ಗುರುಗಳು ಪ್ರತಿಪಾದಿಸಿದರು ಎಂದು ರಂಗಭೂಮಿ, ಚಲನಚಿತ್ರ ನಿರ್ದೇಶಕ ಸ್ಮಿತೇಶ್ ಎಸ್.ಬಾರ್ಯ ತಿಳಿಸಿದರು.

ಗುರುವಾರ ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ, ಘಟಕದ ಮಾಜಿ ಅಧ್ಯಕ್ಷ ಕುಡುಪು ರಾಜೇಶ್ ಬಿ.ಮನೆಯಲ್ಲಿ ಗುರುತತ್ವವಾಹಿನಿ 22ನೇ ಮಾಲಿಕೆಯಲ್ಲಿ ಗುರು ಸಂದೇಶ ನೀಡಿದರು.

ಯುವವಾಹಿನಿ ಕೊಲ್ಯ ಘಟಕದ ಮಾಜಿ ಅಧ್ಯಕ್ಷ ಕುಸುಮಾಕರ್ ಕುಂಪಲ, ಯುವವಾಹಿನಿ ಬಂಟ್ವಾಳ ಘಟಕದ ಉಪಾಧ್ಯಕ್ಷರಾದ ನಾರಾಯಣ ಪಲ್ಲಿಕಂಡ, ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಉದಯ್ ಮೆನಾಡು, ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕರ್ಕೇರ, ರಾಜೇಶ್ ಸುವರ್ಣ, ಸದಸ್ಯರಾದ ಪ್ರಶಾಂತ್ ಏರಮಲೆ, ಸುದೀಪ್ ರಾಯಿ, ಯತೀಶ್ ಬೊಳ್ಳಾಯಿ, ಸೂರಜ್ ತುಂಬೆ, ಜಗನ್ನಾಥ್ ಸುವರ್ಣ ಕಲ್ಲಡ್ಕ, ಹರೀಶ್ ಅಜೆಕಲ, ಅರ್ಜುನ್ ಅರಳ, ಮೆಸ್ಕಾಂ ಕುಲಶೇಖರದ ಮೇಲ್ವಿಚಾರಕರಾದ ಬಾಲಕೃಷ್ಣ, ಜಯಪ್ರಕಾಶ್ ಹಾಗೂ ಮೆಸ್ಕಾಂ ವಾಮಂಜೂರು ಶಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

ಗುರುಸಂದೇಶ ನೀಡಿದ ಸ್ಮಿತೇಶ್ ಬಾರ್ಯ ಹಾಗೂ ಪ್ರಜಿತ್ ಅಮೀನ್ ಅವರನ್ನು ಗೌರವಿಸಲಾಯಿತು. ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net