

ಕಾರಟಗಿ: ಭಾರತೀಯ ವಕೀಲರ ಪರಿಷತ್ತಿನ ಸಹ ಅಧ್ಯಕ್ಷ ಹಾಗೂ ಹಿರಿಯ ವಕೀಲ ಸದಾಶಿವ ರೆಡ್ಡಿ ಅವರ ಮೇಲಿನ ಹಲ್ಲೆ ಖಂಡಿಸಿ ಪಟ್ಟಣದಲ್ಲಿ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಎಂ. ಕುಮಾರಸ್ವಾಮಿಗೆ ಸೋಮವಾರ ಮನವಿ ಸಲ್ಲಿಸಿದರು.
ಸದಾಶಿವ ರೆಡ್ಡಿ ಅವರ ಕಚೇರಿಯಲ್ಲಿ ಅಪರಿಚಿತರು ಅವರ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ. ತಾಲೂಕು ಸಂಘದಿಂದ ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಪದೇ ಪದೆ ಇಂಥ ಘಟನೆಗಳು ನಡೆಯುತ್ತಿರುವುದು ಖೇದಕರ ಸಂಗತಿಯಾಗಿದೆ. ಹೀಗಾಗಿ ಇಂಥ ಘಟನೆಗಳು ಮರುಕಳಿಸಬಾರದು.
ಇದಕ್ಕೆ ಸಂಬಂಧಿಸಿದಂತೆ ಕಠಿಣ ಕಾಯ್ದೆ ಜಾರಿಗೊಳಿಸಬೇಕು. ಹಲ್ಲೆ ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು. ನಂತರ ತಹಸೀಲ್ದಾರ್ ಎಂ. ಕುಮಾರಸ್ವಾಮಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ವಕೀಲರಾದ ಕೇಶವ ನಾಯಕ, ವಿಜಯಕುಮಾರ ನವಲಿ, ತ್ರಿಲೋಚನ ಬೂದಗುಂಪಾ, ಬಸನಗೌಡ ಯರಡೋಣಾ, ಅಮರೇಗೌಡ, ಸುಮಾ ಹಿರೇಮಠ, ಕವಿತಾ, ವಿಜಯ ಪಾಟೀಲ್ ನವಲಿ, ಪಂಪಾಪತಿ ಈಳಿಗನೂರು, ಮಾರುತಿ ಹುಳ್ಳಿಹಾಳ, ಪೃಥ್ವಿರಾಜ, ರಾಚಪ್ಪ, ಶರಣಪ್ಪ ರಾಂಪುರ, ಬಸವರಾಜ ತಳವಾರ ಜೂರಟಗಿ, ತಿಪ್ಪನಗೌಡ ಸಿದ್ದಾಪುರ ಸೇರಿ ಇತರರಿದ್ದರು.