ರಾಜ್ಯದತ್ತ ದೇಶದ ಗ್ಯಾರಂಟಿ ಚಿತ್ತ

ಚಿಕ್ಕಬಳ್ಳಾಪುರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್​ ಆದೇಶ ಪತ್ರ ನೀಡಿದರು. ಶಾಸಕ ಪ್ರದಿಪ್​ ಈಶ್ವರ್​, ಜಿಲ್ಲಾಧಿಕಾರಿ ಪಿ.ಎನ್​.ರವೀಂದ್ರ ಮತ್ತಿತರರು ಇದ್ದರು.
Rajyadatta Deshada Gyaranti chitta
Published on

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್​ ಹೇಳಿಕೆ : ಗೃಹಲಕ್ಷಿ$್ಮಗೆ ಚಾಲನೆ

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ರಾಜ್ಯ ಸರ್ಕಾರವು 4 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದು, ದೇಶವೇ ಕರ್ನಾಟಕದತ್ತ ತಿರುಗಿ ನೋಡುವಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್​ ಸಂತಸ ವ್ಯಕ್ತಪಡಿಸಿದರು.
ನಗರದ ಹಷೋರ್ದಯ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಗೃಹಲಕ್ಷಿ$್ಮ ಯೋಜನೆಯ ಜಿಲ್ಲಾಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರವು ನುಡಿದಂತೆ ನಡೆದುಕೊಂಡಿದೆ. ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ಗ್ಯಾರಂಟಿ ಭರವಸೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ನಿರುದ್ಯೋಗಿ ಪದವೀಧರರಿಗೆ ತಲಾ 3 ಸಾವಿರ ರೂ.ಗಳನ್ನು ನೀಡುವ ಯುವ ನಿಧಿ ಯೋಜನೆ ಮುಂದಿನ ತಿಂಗಳಲ್ಲಿ ಜಾರಿಯಾಗಲಿದೆ ಎಂದರು.
ಶಾಸಕ ಪ್ರದಿಪ್​ ಈಶ್ವರ್​ ಮಾತನಾಡಿ, ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡ ಮತ್ತು ಮಧ್ಯಮ ವರ್ಗದವರಿಗೆ ವರದಾಯಕವಾಗಿದೆ. ಇವು ಪ್ರತಿ ದಿನ ಒಂದು ದಿನದ ಊಟಕ್ಕೂ ಪರದಾಡುವಂತಹವರಿಗೆ ದೇವರ ವರವಂತೆ ಕಾಣಿಸುತ್ತವೆ. ಅದರಲ್ಲೂ ಗೃಹಲಕ್ಷಿ$್ಮ, ಶಕ್ತಿ ಯೋಜನೆಯು ಮಹಿಳೆಯ ಸಬಲೀಕರಣಕ್ಕೆ ಸಹಕಾರಿಯಾಗಿದೆ. ಸವಲತ್ತುಗಳನ್ನು ಅರ್ಹರು ಮಾತ್ರ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಪಿ.ಎನ್​.ರವೀಂದ್ರ ಮಾತನಾಡಿ, ಕುಟುಂಬ ನಿರ್ವಹಣೆಯಲ್ಲಿ ಯಜಮಾನಿಯ ಪಾತ್ರವೂ ಪ್ರಮುಖವಾದುದು. ಈಕೆಯು ಆರ್ಥಿಕವಾಗಿ ಸಬಲೀಕರಣಗೊಂಡಲ್ಲಿ ಆ ಮನೆಯ ಸದಸ್ಯರಿಗೆ ಮುನ್ನಡೆಯಲು ಧೈರ್ಯ ಸಿಕ್ಕಂತಾಗುತ್ತದೆ ಎಂದರು.
ಸಾಂಕೇತಿಕವಾಗಿ ಲಾನುಭವಿಗಳಾದ ಅರುಣ, ಎಂ.ಎಸ್​ ಲಲಿತಮ್ಮ, ಜಮೀಲಾ ಬೇಗಂ, ಜಿ.ವಿ.ಶುಭಾ, ಗಾಯತ್ರಿ, ಸಾವಿತ್ರಿ ಅವರಿಗೆ ಮಂಜೂರಾತಿ ಆದೇಶ ಪತ್ರ ವಿತರಿಸಲಾಯಿತು.
ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಿ.ಎಲ್​.ನಾಗೇಶ್​, ಅಪರ ಜಿಲ್ಲಾಧಿಕಾರಿ ಎನ್​.ತಿಪ್ಪೇಸ್ವಾಮಿ, ಉಪ ವಿಭಾಗಾಧಿಕಾರಿ ಡಿ.ಎಚ್​.ಅಶ್ವಿನ್​, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಸಿ.ಅಶ್ವತ್ಥಮ್ಮ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಂತೋಷ್​ಕುಮಾರ್​, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಮಾಜಿ ಅಧ್ಯ ಯಲುವಳ್ಳಿ ಎನ್​.ರಮೇಶ್​, ಕೋಚಿಮುಲ್​ ನಿರ್ದೇಶಕ ವೆಂಕಟೇಶ್​, ಡಿಸಿಸಿ ಬ್ಯಾಂಕಿನ ನಿರ್ದೇಶಕ ನಾಗೇಶ್​ ಇದ್ದರು.


ಕಾರ್ಯಕ್ರಮದಲ್ಲಿ ಕಿರಿಕಿರಿ
ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹಲಕ್ಷಿ$್ಮ ಯೋಜನೆಗೆ ಚಾಲನೆ ನೀಡುವ ರಾಜ್ಯಮಟ್ಟದ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಯಿತು. ಇದೇ ವೇಳೆ ಕಿರಿಕಿರಿ ಅನುಭವಿಸುವಂತಾಯಿತು. ಸಂವಿಧಾನ ಪ್ರಸ್ತಾವನೆ ಬೋಧನೆಯ ದೃಶ್ಯ ಬರುತ್ತಿದ್ದಂತೆ ಸಭಿಕರು ಎದ್ದು ನಿಂತುಕೊಂಡಾಗ ಖಾಸಗಿ ಚಾನಲ್​ ಜಾಹಿರಾತುಗಳು ಪ್ರಕಟವಾದವು. ಕೊನೆಗೆ ಪ್ರಮಾಣ ವಚನ ಸ್ವೀಕರಿಸಲಾಗಲಿಲ್ಲ. ನಾಡಗೀತೆಯ ಗಾಯನದ ಸಂದರ್ಭದಲ್ಲೂ ಆಗಾಗ ಸ್ಥಗಿತಕ್ಕೆ ಎದ್ದು ಕುಳಿತುಕೊಳ್ಳಬೇಕಾಯಿತು. ಕಾಂಗ್ರೆಸ್​ ಮುಖಂಡರು ಮತ್ತು ಕಾರ್ಯಕರ್ತರು ವೇದಿಕೆಗೆ ನುಗ್ಗಿದ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆಯಾಗಿ ಹೊಸದಾಗಿ ಖುರ್ಚಿಗಳನ್ನು ಹಾಕಿಸಲು ಸಬ್​ಇನ್​ಸ್ಪೆಕ್ಟರ್​ ಸೇರಿದಂತೆ ಇತರ ಪೊಲೀಸರು ಹೈರಾಣರಾದರು.


ಶೇ.83.98 ನೋಂದಣಿ
ಗೃಹಲಕ್ಷಿ$್ಮ ಯೋಜನೆಯಡಿ ಜಿಲ್ಲೆಯಲ್ಲಿ ಶೇ. 83.98 ಮಹಿಳೆಯರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಭಾಗದಲ್ಲಿ 2,99,909 ಅರ್ಹ ಫಲಾನುಭವಿಗಳು ಇದ್ದು, ಈಗಾಗಲೇ 2,51,530 ಮಹಿಳೆಯರ ನೋಂದಣಿಯಾಗಿದೆ. ಈ ಪೈಕಿ ಬುಧವಾರ 1 ಲ ಮಹಿಳೆಯರ ಖಾತೆಗೆ ನೇರ ನಗದು ಪಾವತಿಯ ಮೂಲಕ ತಲಾ 2000 ರೂ ವರ್ಗಾವಣೆಯಾಗಿದೆ. ಬಾಕಿ ಉಳಿದ ಫಲಾನುಭವಿಗಳಿಗೆ ಹಂತ ಹಂತವಾಗಿ ಹಣ ಜಮೆಯಾಗಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.


ಫಲಾನುಭವಿಗಳ ಸಂತಸ
ಕಾರ್ಯಕ್ರಮದಲ್ಲಿ ಗೃಹಲಕ್ಷಿ$್ಮ ಯೋಜನೆಯ ಲಾನುಭವಿಗಳು ಅಭಿಪ್ರಾಯವನ್ನು ಹಂಚಿಕೊಂಡರು. ಸರ್ಕಾರದ ಈ ನೆರವಿನಿಂದ ಆರೋಗ್ಯ, ಶಿಕ್ಷಣ ಸೇರಿ ತುರ್ತು ಸಂದರ್ಭದಲ್ಲಿ ಹಣವನ್ನು ಬಳಸಿಕೊಳ್ಳಲು ಸಹಕಾರಿಯಾಗಿದೆ. ಮನೆಯಲ್ಲಿರುವವರನ್ನು ಕೇಳಿ, ಪಡೆಯುವ ಸಮಸ್ಯೆ ತಪ್ಪಿದೆ ಎಂದು ಮುನಿರತ್ನಮ್ಮ ತಿಳಿಸಿದರೆ, ಪ್ರಮುಖವಾಗಿ ವಯೋವೃದ್ಧ ಮಹಿಳೆಯರಿಗೆ ಅನುಕೂಲಕರವಾಗಿರುವ ಯೋಜನೆಯು ಹಣದ ಉಳಿತಾಯದ ಮೂಲಕ ಸ್ವಾವಲಂಬಿ ಜೀವನ ನಡೆಸಬಹುದಾಗಿದೆ ಎಂದು ಲಾನುಭವಿ ಭರಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net