ಶೇಂಗಾ ಬೆಳೆ ಬರಕ್ಕೆ ಅರ್ಪಿತ

K HALLI RAITA PRAYATNA..
Published on

ಕೊಂಡ್ಲಹಳ್ಳಿ: ಮೊಳಕಾಲ್ಮೂರು ತಾಲೂಕು ಕಸಬಾ ಹೋಬಳಿಯ ಕೊಂಡ್ಲಹಳ್ಳಿ ಭಾ ಗದಲ್ಲಿ ಕಳೆದೊಂದು ತಿಂಗಳಿಂದ ಮಳೆ ಮಾಯವಾಗಿ ಶೇಂಗಾ ಸೇರಿ ಇತರ ಬೆಳೆಗಳು ಬಾಡುತ್ತಿವೆ.

ಅನ್ನದಾತರು ಬರ ಪರಿಹಾರ, ಬೆಳೆವಿಮೆ ದೊರಕುವುದೇ ಎಂಬ ನಿರೀಕ್ಷೆಯಲ್ಲಿ ಕಾಲ ತಳ್ಳುತ್ತಿದ್ದಾರೆ. ಆದರೆ, ಇದುವರೆಗೆ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ.

ಈ ನಡುವೆ ಕೋನಸಾಗರದ ರೈತ ತಿಮ್ಮಪ್ಪ ಸೇರಿ ಕೆಲವರು ಖುಷ್ಕಿಯಲ್ಲಿ ಬೆಳೆದ ಶೇಂಗಾ ಬೆಳೆಗೆ ನೀರು ಹಾಯಿಸಿ ಬೆಳೆ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಏಳು ಎಕರೆಯಲ್ಲಿ ಶೇಂಗಾ ಬಿತ್ತನೆ ಮಾಡಿದ್ದೇನೆ. ಅಂದಾಜು 70-80 ಸಾವಿರ ರೂ. ಖರ್ಚಾಗಿದೆ. ಮಳೆ ಕೊರತೆಯಿಂದ ಬೆಳೆ ಒಣಗುತ್ತಿದೆ. ಕನಿಷ್ಟ ಬೀಜ, ಗೊಬ್ಬರದ ಖರ್ಚಾದರೂ ಸಿಗಬಹುದೆಂದು ಯೋಚಿಸಿ ನೀರು ಕೊಡುವ ಪ್ರಯತ್ನ ಮಾಡುತ್ತಿದ್ದೇನೆ ಎನ್ನುತ್ತಾರೆ ರೈತ ತಿಮ್ಮಪ್ಪ.

ವರದಿ: ಮುಂಗಾರು ಹಂಗಾಮಿನಲ್ಲಿ 21 ಸಾವಿರ ಹೆಕ್ಟೇರ್ ಶೇಂಗಾ ಬಿತ್ತನೆ ಆಗಿದೆ. ಮಳೆ ಅಭಾವದಿಂದ ಶೇ.70 ಕ್ಕೂ ಹೆಚ್ಚು ಪ್ರಮಾಣದ ಬೆಳೆ ನಷ್ಟವಾಗಿದೆ. ಈ ಕುರಿತು ಸಲ್ಲಿಸಲಾದ ವರದಿ ಆಧರಿಸಿನ ಸರ್ಕಾರ ಮೊಳಕಾಲ್ಮೂರು ತಾಲೂಕನ್ನು ಬರ ಪೀಡಿತ ಎಂದು ಘೋಷಿಸಿದೆ.- ವಿ.ಸಿ.ಉಮೇಶ್, ಸ.ನಿರ್ದೇಶಕ, ಕೃಷಿ ಇಲಾಖೆ, ಮೊಳಕಾಲ್ಮೂರು ತಾಲೂಕು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net