ಹಸಿರು ಜಗದೆಲ್ಲ ಜೀವಿಗಳ ಉಸಿರು

HLK SASI 14
Published on

ಹೊಳಲ್ಕೆರೆ: ಶಾಲಾ-ಕಾಲೇಜ್, ರಸ್ತೆ ಬದಿ, ಮೈದಾನ, ಖಾಲಿ ಜಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಸಿ ನೆಟ್ಟು ಪೋಷಿಸಿದರೆ ಉತ್ತಮ ವಾತಾವರಣ ಜತೆಗೆ ಒಳ್ಳೆಯ ಮಳೆ-ಬೆಳೆ ಆಗಲಿದೆ ಎಂದು ಮುಖ್ಯಶಿಕ್ಷಕ ನಾಗರಾಜ ಹೇಳಿದರು.

ಸಸ್ಯ ಶ್ಯಾಮಲ ಯೋಜನೆಯಡಿ ತುಪ್ಪದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾವರಣದಲ್ಲಿ 125 ಸಸಿ ನೆಡುವ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿ, ಹಸಿರು ಜಗದೆಲ್ಲ ಜೀವಿಗಳ ಉಸಿರು ಎಂದರು.

ವಾತಾವರಣದ ವೈಪರಿತ್ಯ, ಅನಿರೀಕ್ಷಿತ ಬರಗಾಲ ಮತ್ತು ಅತಿವೃಷ್ಟಿ ತಪ್ಪಿಸಲು ಭೂಮಿಯ ಹಸಿರೀಕರಣ ಅನಿವಾರ್ಯ. ಪರಿಸರ ಉಳಿಸಿಕೊಂಡರೆ ನಾವು ಉಳಿಯಲಿದ್ದೇವೆ ಎಂದು ಹೇಳಿದರು.

ಶಿಕ್ಷಕ ಬಸವರಾಜಪ್ಪ ಮಾತನಾಡಿ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸಸ್ಯ ಶ್ಯಾಮಲದಡಿ ಗಿಡಗಳನ್ನು ಬೆಳೆಸುವ ಮೂಲಕ ಹಸಿರು ಶಾಲೆ ಮಾಡಲಾಗುವುದು ಎಂದರು. ಸಸ್ಯಗಳನ್ನು ಒದಗಿಸಿದ ಜೇನು ಕೃಷಿಕ ಭೈರೇಶ ಅವರಿಗೆ ಧನ್ಯವಾದ ಹೇಳಿದರು.

ಸಹಶಿಕ್ಷಕರಾದ ಸುರೇಶ, ಮಹೇಶ್ವರಪ್ಪ, ಹೇಮಲತಾ, ಟಿ.ಬಿ.ಅನಿತಾ ಉಮೇಶ್, ಮಮತಾ, ದೀಪಾ, ಸುಮಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net