ಭೂಮಿ ಮೇಲಿನ ಮಹಾನ್ ಶಕ್ತಿ

The greatest power on earth
ಇಳಕಲ್ಲನ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಪ್ರಮಾಣ ವಚನ ಸ್ವೀಕರಿಸಿದರು. ಗುರುಮಹಾಂತ ಶ್ರೀಗಳು, ಡಾ. ಬಸವಲಿಂಗ ಸ್ವಾಮಿಗಳು, ಶರಣಪ್ಪ ಆಮದಿಹಾಳ, ಹೇಮಂತ ಭೂತನಾಳ, ಸುರೇಶ ಜಂಗ್ಲಿ, ಪಿಎಸ್‌ಐ ಷಹಜಹಾನ ನಾಯಕ ಇದ್ದಾರೆ.
Published on

ಇಳಕಲ್ಲ(ಗ್ರಾ): ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಓರ್ವ ವ್ಯಕ್ತಿ ಮಾತ್ರವಲ್ಲ. ಈ ಭೂಮಿಯ ಮೇಲಿನ ಮಹಾನ್ ಶಕ್ತಿ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಪಟ್ಟಣದ ಸಮುದಾಯ ಭವನದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಹಿತರಕ್ಷಣಾ ಸಮಿತಿ ವತಿಯಿಂದ ಸೋಮವಾರ ಆಯೋಜಿಸಿದ್ದ 134ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಿಕ್ಷಣದಿಂದ ಎಂತಹ ಸಾಧನೆಗಳನ್ನಾದರೂ ಮಾಡಬಹುದು ಎಂಬುದಕ್ಕೆ ಅಂಬೇಡ್ಕರ್ ಸಾಕ್ಷಿಯಾಗಿದ್ದಾರೆ ಎಂದರು.

ಸಮಿತಿಯ ಅಧ್ಯಕ್ಷ, ನಿವೃತ್ತ ಸ್ಟೇಟ್ ಬ್ಯಾಂಕ್ ವ್ಯವಸ್ಥಾಪಕ ಶರಣಪ್ಪ ಆಮದಿಹಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಬೇಡ್ಕರ್ ನೀಡಿದ ಸಂವಿಧಾನದಿಂದಾಗಿ ಇಂದು ದೀನ ದಲಿತರಿಗೆ, ಮಹಿಳೆಯರಿಗೆ ಅವಕಾಶಗಳು ಮೀಸಲಾಗಿವೆ. ಇಲ್ಲದಿದ್ದರೆ ಎಲ್ಲಾ ಅಧಿಕಾರಗಳು ಉಳ್ಳವರು ಮಾತ್ರ ಅನುಭವಿಸುತ್ತಿದ್ದರು ಎಂದರು.

ಪ್ರಿಯದರ್ಶಿನಿ ಆಮದಿಹಾಳ ಅವರು ಅಂಬೇಡ್ಕರ್ ಅವರ ಜೀವನದ ಕುರಿತು ಉಪನ್ಯಾಸ ನೀಡಿದರು. ಸಾನ್ನಿಧ್ಯವಹಿಸಿದ್ದ ಗುರುಮಹಾಂತ ಶ್ರೀಗಳು, ಶಿರೂರ ನಿಸರ್ಗ ಕೇಂದ್ರದ ಸಂಚಾಲಕ ಡಾ. ಬಸವಲಿಂಗ ಸ್ವಾಮಿಗಳು ಮಾತನಾಡಿದರು.

ಹೇಮಂತ ಭೂತನಾಳ, ಸುರೇಶ ಜಂಗ್ಲಿ, ಪಿಎಸ್‌ಐ ಷಹಜಹಾನ ನಾಯಕ ಮತ್ತು ಸಮಿತಿಯ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ದಿಲೀಪ್ ಕಲ್ಮನಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net