

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ ದಾನ ರಕ್ತದಾನ. ಒಂದು ಯೂನಿಟ್ ರಕ್ತ ಮೂರು ಜನರ ಜೀವ ಉಳಿಸುತ್ತದೆ. ವರ್ಷಕ್ಕೆ ನಾಲ್ಕು ಬಾರಿ ರಕ್ತದಾನ ವಾಡುವುದರಿಂದ ಜೀವಿತ ಅವಧಿ ಹೆಚ್ಚುತ್ತದೆ. ಈ ಕೆಲಸ ಪುಣ್ಯದ ಕೆಲಸ. ಇಂತಹ ಶಿಬಿರಗಳಿಂದ ಸ್ವಯಂಪ್ರೇರಿತರಾಗಿ ವಾಡುವುದರಿಂದ ಉಡುಪಿ ಜಿಲ್ಲೆಯ ನತೆ ಹೆಚ್ಚುತ್ತದೆ ಎಂದು ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಅಬಿದ್ ಗೆದ್ಲಾಳ್ ಹೇಳಿದರು.
ಭಾನುವಾರ ಕೊಕ್ಕರ್ಣೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಪಂಚಾಕ್ಷರಿ ಗೇರುಬೀಜ ಕಾರ್ಖಾನೆ ಬೈದೆಬೆಟ್ಟು ಹಾಗೂ ಬೇರು ಕಲೆಕ್ಟಿವ್ ಬ್ರಹ್ಮಾವರ ಇವರ ಪ್ರಾಯೋಜಕತ್ವದಲ್ಲಿ, ಆಶ್ರಯ ಹಸ್ತ ಟ್ರಸ್ಟ್, ನೇತ್ರಜ್ಯೋತಿ ಚಾರಿಟೆಬಲ್ ಟ್ರಸ್ಟ್, ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆ ಉಡುಪಿ, ಜಿಲ್ಲಾ ರಕ್ತನಿಧಿ ಕೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕೊಕ್ಕರ್ಣೆ ಮತ್ತು ಸರ್ಕಾರಿ ಆಯುರ್ವೇದ ಆಸ್ಪತ್ರೆ ಕರ್ಜೆ ಇವರ ಜಂಟಿ ಸಹಭಾಗಿತ್ವದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಆಯುರ್ವೇದ ಚಿಕಿತ್ಸಾ ಶಿಬಿರ, ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ರಕ್ತದಾನ ಶಿಬಿರವನ್ನು ಉಡುಪಿ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಉದ್ಘಾಟಿಸಿ ಮಾತನಾಡಿದರು. ನೇತ್ರ ಚಿಕಿತ್ಸಾ ಶಿಬಿರವನ್ನು ಬೈದೆಬೆಟ್ಟು ಶ್ರೀ ಪಂಚಾಕ್ಷರಿ ಗೇರುಬೀಜ ಕಾರ್ಖಾನೆ ಮತ್ತು ಸಮೂಹ ಸಂಸ್ಥೆ ವಾಲೀಕರಾದ ಶಾಲಿನಿ ರುರಾಮ ಮತ್ತು ಸಿಎ ರುರಾಮ ಎಂ.ಎಚ್ ಉದ್ಘಾಟಿಸಿದರು.
ಉಡುಪಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಚ್.ಅಶೋಕ, ಕೊಕ್ಕರ್ಣೆ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಸುರೇಶ, ಕರ್ಜೆ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ವೈದ್ಯಾಧಿಕಾರಿ ಡಾ.ಪ್ರಕಾಶ್ ನಾಯ್ಕ, ಪ್ರಮುಖರಾದ ಡಾ.ಸುನೀತಾ ಶೆಟ್ಟಿ, ಪ್ರಸಾದ್ ರಾಜ್ ಕಾಂಚನ್, ಕಾಶಿನಾಥ ಶೆಣೈ, ಹರೀಶ್ ಶಾನುಭೋಗ, ವಸಂತ ನಾಯ್ಕ, ಪ್ರಕಾಶ ಶೆಟ್ಟಿ, ಶಾಂತರಾಜ ಶೆಟ್ಟಿ, ಸಿಎ ಅವಿನಾಶ್, ರಾಮ್ದಾಸ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ಅರುಣ್ ಕುವಾರ್ ಶೆಟ್ಟಿ ಸ್ವಾಗತಿಸಿ, ಶಿಕ್ಷಕ ಶಶಿಧರ್ ಶೆಟ್ಟಿ ನಂಚಾರು ನಿರೂಪಿಸಿ, ವಂದಿಸಿದರು.
ದಾನ ವಾಡುವುದು ಶ್ರೇಷ್ಠ ಕಾರ್ಯ. ದಾನ ವಾಡಿದ ವ್ಯಕ್ತಿಗೆ ಯಾರಿಗೆ ದಾನ ವಾಡಿದ್ದೇನೆ ಮತ್ತು ದಾನ ಪಡೆದ ವ್ಯಕ್ತಿಗೆ ಯಾರಿಂದ ದಾನ ದೊರಕಿದೆ ಎನ್ನುವುದು ತಿಳಿಯಬಾರದು. ನಾನು, ನನ್ನದು, ನನ್ನಿಂದ ಎನ್ನುವ ಭಾವನೆ ದೂರವಾಗಿ ನಾವು ನಮ್ಮಿಂದ ಎನ್ನುವ ಭಾವನೆ ಬರಬೇಕು. ರಕ್ತಕ್ಕೆ ಬದಲಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಆರೋಗ್ಯವಂತ ವ್ಯಕ್ತಿ ರಕ್ತದಾನ ವಾಡಬೇಕು. -ಸಿಎ ರುರಾಮ್ ಎಂ.ಎಚ್., ಪಂಚಾಕ್ಷರಿ ಗೇರುಬೀಜ ಕಾರ್ಖಾನೆ ಮಾಲೀಕ https://www.vijayavani.net/children-need-a-life-affirming-education https://www.vijayavani.net/riders-face-hardship-due-to-lack-of-sewer-repairs