

ವಿಜಯಪುರ: ಜನಪದ ಸಾಹಿತ್ಯ ಅತ್ಯಂತ ಪ್ರಾಚಿನವಾದ ವಿಶಿಷ್ಟ ಸಾಹಿತ್ಯವಾಗಿದ್ದು, ಹಳ್ಳಿಗಾಡಿನ ಬದುಕು ಜನಪದ ಸಾಹಿತ್ಯದ ಮೂಲವಾಗಿದೆ ಎಂದು ಸಿಂದಗಿಯ ಹಿರಿಯ ಜಾನಪದ ವಿದ್ವಾಂಸ ಪ್ರೊ. ಬಿ.ಎನ್. ಪಾಟೀಲ ಹೇಳಿದರು.
ನಗರದ ಕಸಾಪ ಸಭಾಂಗಣದಲ್ಲಿ ಜಿಲ್ಲೆ, ತಾಲೂಕು ಹಾಗೂ ಕಸಾಪ ನಗರ ಟಕಗಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿವಿಧ ದತ್ತಿನಿಧಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯ, ನೈತಿಕತೆ ಇದೆ. ಇನ್ನೂ ವಿಶೇಷವಾಗಿ ಈ ಸಾಹಿತ್ಯದಲ್ಲಿ ನಮ್ಮೆಲ್ಲರ ಬದುಕಿಗೆ ಬೇಕಾದ ಪಾಠ ಅಡಕವಾಗಿದೆ. ಜಾನಪದ ಸಾಹಿತ್ಯಕ್ಕೆ ವಿಜಯಪುರ ಜಿಲ್ಲೆಯ ಅದರಲ್ಲೂ ವಿಶೇಷವಾಗಿ ಹಲಸಂಗಿ ಗೆಳೆಯರ ಬಳಗದ ಕೊಡುಗೆ ಅಪಾರವಾಗಿದೆ. ಸದ್ಯ ಜಾನಪದ ಸಾಹಿತ್ಯ ಜಗತ್ತಿನ ಶ್ರೇಷ್ಠ ಸಾಹಿತ್ಯವಾಗಿ ಹೊರಹೊಮ್ಮಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಚೇತನಾ ಶಿಕ್ಷಣ ಸಂಸ್ಥೆ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯ ಅಡಿವೇಶ ಕೊಳಮಲಿ ಮಾತನಾಡಿ, ಜಾನಪದ ಸಾಹಿತ್ಯ ವ್ಯಕ್ತಿತ್ವ ವಿಕಸನಗೊಳಿಸಲಿದೆ. ಯುವಪೀಳಿಗೆ ಜಾನಪದ ಸಾಹಿತ್ಯದ ಕುರಿತು ಹೆಚ್ಚು ಹೆಚ್ಚು ಅಧ್ಯಯನ ಮಾಡಬೇಕು. ಜಾನಪದ ಗೀತೆ, ಗಾದೆ, ಒಗಟುಗಳನ್ನು ಸಂಗ್ರಹಿಸುವ ಕಾರ್ಯ ಇಂದು ಯುವ ಮಿತ್ರರಿಂದ ನಡೆಯಬೇಕು ಎಂದರು.
ಬಸವನಬಾಗೇವಾಡಿ ತಾಲೂಕು ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ದೇವೇಂದ್ರ ಗೋನಾಳ ಉಪನ್ಯಾಸ ನೀಡಿ, ಮನುಷ್ಯನ ಹುಟ್ಟಿನಿಂದ ಸಾಯುವವರೆಗೆ ಕ್ರಿಯಾಶೀಲವಾಗಿರುವ ಸಾಹಿತ್ಯವೆಂದರೆ ಜಾನಪದ ಸಾಹಿತ್ಯ ಎಂದರು.
ಅರ್ಜುಣಗಿ ಸರ್ಕಾರಿ ಪ.ಪೂ ಕಾಲೇಜಿನ ಉಪನ್ಯಾಸಕಿ ಡಾ. ಸವಿತಾ ಝಳಕಿ ಜಾನಪದ ಸಾಹಿತ್ಯದಲ್ಲಿ ಗರತಿ ಉಪನ್ಯಾಸ ನೀಡಿದರು. ಶಿಲ್ಪಾ ಭಸ್ಮೆ ಸ್ವಾಗತಿಸಿ ಗೌರವಿಸಿದರು. ಡಾ. ಆನಂದ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ನಿರೂಪಿಸಿದರು. ಮಮತಾ ಮುಳಸಾವಳಗಿ ವಂದಿಸಿದರು.
ವಿಶ್ರಾಂತ ಪ್ರಾಚಾರ್ಯ ಎಂ.ಬಿ. ಮಮದಾಪೂರ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವಿಶ್ರಾಂತ ವ್ಯವಸ್ಥಾಪಕ ಜಿ.ಡಿ. ಮಲ್ಲಿಗವಾಡ, ಮಾಜಿ ಸೈನಿಕ ಸಿದ್ರಾಮ ಬೀಳಗಿ ಹಾಗೂ ಸಿಂಧೂ ಜಾಧವ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಅಭಿಷೇಕ ಚಕ್ರವರ್ತಿ, ರವಿ ಕಿತ್ತೂರ, ವಿಜಯಲಕ್ಷಿ$್ಮ ಹಳಕಟ್ಟಿ, ಭಾಗೀರಥಿ ಸಿಂಧೆ, ಸುಖದೇವಿ ಅಲಬಾಳಮಠ, ಜಿ.ಎಸ್. ಬಳ್ಳೂರ, ವೈ.ಎಚ್. ಲಂಬೂ, ಎನ್.ಆರ್. ಕುಲಕರ್ಣಿ, ಎಸ್.ಎಂ. ಕಣಬೂರ, ವಿ.ಎಸ್. ಖಾಡೆ, ಶ್ರೀಕಾಂತ ನಾಡಗೌಡ, ಶಿವಾನಂದ ಬಸೆಟ್ಟಿ, ಯಶಸ್ ಮಿರಜಕರ, ಬಿ.ಪಿ. ಖಂಡೇಕಾರ, ಭಾಗ್ಯಶ್ರೀ ಪಾಟೀಲ ಇತರರಿದ್ದರು.