

ಮಧುಗಿರಿ: ವಿಚಾರ ಮತ್ತು ಸಾಂಪ್ರದಾಯಿಕ ಸಮನ್ವಯ ಕಾದಂಬರಿಕಾರ, ಜನಮಾನಸದ ಆಕರ್ಷಣೆ ಎಸ್.ಎಲ್.ಭೈರಪ್ಪ ಎಂದು ಹಿರಿಯ ಸಾಹಿತಿ ಪ್ರೊ.ಮಾಲನ ಮೂರ್ತಿ ನುಡಿದರು.
ಪಟ್ಟಣದ ಟಿವಿವಿ ಬಿಎಡ್ ಕಾಲೇಜಿನಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭೈರಪ್ಪ ಅವರು ಕನ್ನಡ ಸಾರಸ್ವತ ಲೋಕದ ಧೀಮಂತ ಬರಹಗಾರ, ವಿಚಾರವಂತಿಕೆ ಮತ್ತು ಸಾಂಪ್ರದಾಯಿಕತೆಯ ಸಮನ್ವತೆಯನ್ನು ಸಮಾಜಕ್ಕೆ ನೀಡಿದ್ದಾರೆ ಎಂದರು.
ಸರಸ್ವತಿ ಸಮ್ಮಾನ ಪ್ರಶಸ್ತಿ ಪಡೆದಿದ್ದ ಅವರು, ವಂಶವೃಕ್ಷ, ಗೃಹಭಂಗ, ಧರ್ಮಶ್ರೀ, ತಬ್ಬಲಿ ನೀನಾದೆ ಮಗನೆ, ಸತ್ಯ ಮತ್ತು ಸೌಂದರ್ಯ, ಕಥೆ-ಕಥಾವಾಸ್ತು, ಹಾಗೂ ಭಿತ್ತಿ ಎಂಬ ಆತ್ಮವೃತ್ತ ಬರೆದಿದ್ದಾರೆ. ಮಹಾಭಾರತ ಕಥೆಯ ಪರ್ವ ಕಾದಂಬರಿ ಬಹು ಮಂದಿಯ ಮನ ಮುಟ್ಟಿತು ಎಂದರು.
ಪ್ರಾಂಶುಪಾಲ ಡಾ.ಎಸ್.ಶಿವಕುಮಾರಸ್ವಾಮಿ ಮಾತನಾಡಿ, ಭೈರಪ್ಪನವರ ಕಾದಂಬರಿಗಳು ಜೀವನ ಮೌಲ್ಯಗಳ ಪ್ರತೀಕವಾಗಿದ್ದವು ಎಂದು ತಿಳಿಸಿದರು.