ಹಿಪ್ಪರಗಿ ಅಣೆಕಟ್ಟೆಗೆ ಬಾರದ ಮಹಾ ನೀರು

The great water does not reach the Hipparagi dam
ಮಹಿಷವಾಡಗಿ ಬ್ಯಾರೇಜ್​ನಲ್ಲಿ ಶೇಖರಣೆಯಾಗಿರುವ "ಮಹಾ' ನೀರು.
Published on

ರಬಕವಿ/ಬನಹಟ್ಟಿ: ಕಳೆದ ವಾರ ಮಹಾರಾಷ್ಟ್ರದ ರಾಜಾಪುರ ಜಲಾಶಯದಿಂದ ಬಿಟ್ಟಿದ್ದ ಅಂದಾಜು ಸಾವಿರ ಕ್ಯೂಸೆಕ್​ನಷ್ಟು ಹೆಚ್ಚುವರಿ ನೀರು ಶನಿವಾರ ಸಮೀಪದ ಮಹಿಷವಾಡಗಿ ಸೇತುವೆಗೆ ಬಂದಿದ್ದು, ಅಲ್ಪ ಪ್ರಮಾಣದ ಒತ್ತಡದಿಂದ ನೀರು ಬರುತ್ತಿದ್ದು, ಹೀಗಾಗಿ ಹಿಪ್ಪರಗಿ ಜಲಾಶಯ ತಲುಪಲು ಅಸಾಧ್ಯವಾಗಿದೆ.

ಈಗಾಗಲೇ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಬಹುತೇಕ ಪಟ್ಟಣ ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ನಿಂತು ಹೋಗಿತ್ತು. ರೈತರು ಕಂಗಾಲಾಗಿದ್ದರು. ಇದೀಗ ಕೃಷ್ಣೆ ಕೊಂಚ ಮೈತುಂಬಿಕೊಂಡಿದ್ದು, ಜನ&ಜಾನುವಾರುಗಳು ನಿರಾಳವಾಗುವಲ್ಲಿ ಕಾರಣವಾಗಿದೆ.

ನೀರು ಪೂರೈಕೆ ಆರಂಭ: ವಾರದಿಂದ ಅವಳಿ ನಗರದ ಜನತೆಗೆ ಸ್ಥಗಿತಗೊಂಡಿದ್ದ ನೀರು ಪೂರೈಕೆ ಭಾನುವಾರದಿಂದ ಆರಂಭವಾಗಿದೆ.

ಮಹಿಷವಾಡಗಿ ಬ್ಯಾರೇಜ್​ನಲ್ಲಿ ನೀರು ಸಂಗ್ರಹಗೊಂಡಿದ್ದು, ಇನ್ನೂ ಮುಂದೆ ಸಮರ್ಪಕವಾಗಿ ನೀರು ಪೂರೈಸಲಾಗುವುದೆಂದು ಪೌರಾಯುಕ್ತ ಜಗದೀಶ ಈಟಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net