ದೇಶಕಂಡ ಮಹಾನ್ ಚೇತನ ಡಾ.ಎಪಿಜೆ ಅಬ್ದುಲ್ ಕಲಾಂ

WhatsApp Image 2022-10-15 at 12.44
ವಿಜಯಪುರದ ಗುನ್ನಾಪುರ ರಸ್ತೆಯ ಬಸವನಗರದಲ್ಲಿ ಶನಿವಾರ ಭಾರತ ರತ್ನ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಜನ್ಮದಿನವನ್ನು ಆಚರಿಸಲಾಯಿತು. ದಾನೇಶ ಅವಟಿ, ಮುನ್ನಾ ಬಿಜಾಪುರ, ರವಿ ಚವ್ಹಾಣ, ಗೌಸ ಬೀಡಿವಾಲೆ, ಬಾಳು ರಾಠೋಡ ಮತ್ತಿತರರಿದ್ದರು.
Published on

ವಿಜಯಪುರ : ಭಾರತ ದೇಶ ಕಂಡ ಅತ್ಯದ್ಭುತ ವ್ಯಕ್ತಿತ್ವದ ಜ್ಞಾನ, ವಿಜ್ಞಾನ, ತಂತ್ರಜ್ಞಾನ, ರಾಜಕೀಯ ಲೋಕದ ಕೀರ, ಭಾರತರತ್ನ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಮಹಾನ್ ರಾಷ್ಟ್ರೀಯ ನಾಯಕ ಎಂದು ವಕೀಲ ದಾನೇಶ ಅವಟಿ ನುಡಿದರು.

ಇಲ್ಲಿನ ಗುನ್ನಾಪುರ ರಸ್ತೆಯ ಬಸವನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭಾರತ ರತ್ನ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಮಿಳುನಾಡಿನ ರಾಮೇಶ್ವರಂ ನಲ್ಲಿ ಅತ್ಯಂತ ಬಡಕುಟುಂಬದಲ್ಲಿ ಜನ್ಮತಾಳಿದ ಅವರು ಶಿಕ್ಷಣ ಮತ್ತು ಜೀವನ ನಿರ್ವಹಣೆಗೆ ಪಡಬಾರದ ಕಷ್ಟಪಟ್ಟು ವಿಜ್ಞಾನ ತಂತ್ರಜ್ಞಾನದಲ್ಲಿ ಉನ್ನತ ಪದವಿ ಪಡೆದು ಕ್ಷಿಪಣಿಗಳ ಜನಕ ಎಂದು ಖ್ಯಾತರಾದವರು. ಭಾರತವನ್ನು ಬಲಿಷ್ಠ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿಸಿದರು. ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನ ಅಲಂಕರಿಸಿ, ಅತ್ಯುತ್ತಮ ನಿರ್ಣಯ ಕೈಗೊಂಡು ದೇಶ ವಿದೇಶಗಳ ಮೆಚ್ಚುಗೆ ಪಡೆದರು ಎಂದು ತಿಳಿಸಿದರು.

ಅಧಿಕಾರ, ಆಸ್ತಿ, ಅಂತಸ್ತು ಯಾವುದನ್ನು ತಲೆಗೇರಿಸಿಕೊಳ್ಳದೆ, ಅವಿವಾಹಿತರಾಗಿದ್ದು ತಮ್ಮ ಹೆಸರಿನಲ್ಲಿಯೇ ಇರುವ ಕೀರ ಎಂಬ ಶಬ್ದಕ್ಕೆ ಸಾರ್ಥಕತೆ ಬರುವಂತೆ ಭಾವೈಕ್ಯತೆಯ ಬಂಧುವಾಗಿ ಬದುಕಿದ ಮಹಾನ್ ಚೇತನ ಎಂದು ಬಣ್ಣಿಸಿದರು.

ವಕೀಲ ಮುನ್ನಾ ಬಿಜಾಪುರ ಮಾತನಾಡಿ, ರಾಜಕೀಯದಲ್ಲಿ ಇದ್ದರೂ ಸಂತರಂತೆ ಬದುಕಿದ ಮಹಾನ್ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್‌ಸಿಂಗ್ ಅವರ ಜೊತೆಗೆ ರಾಷ್ಟ್ರಪತಿಯಾಗಿ ದೇಶವನ್ನು ಮುನ್ನಡೆಸಲು ಶ್ರಮಿಸಿದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜೀವನ ಮತ್ತು ಆದರ್ಶ ವಿಚಾರ ಧಾರೆಗಳು ನಮಗೆಲ್ಲ ಅನುಕರಣೀಯ. ಅವರ ತತ್ವ ಸಿದ್ಧಾಂತಗಳು ನಮ್ಮ ಬಾಳಿನ ಬೆಳಕು. ಅವುಗಳನ್ನು ಪ್ರತಿ ಒಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ‘ವಿಂಗ್ಸ್ ಆಫ್​ ಫೈರ್’ ಕೃತಿಯನ್ನು ಪ್ರತಿಯೊಬ್ಬ ಯುವಕರು ಓದಿ ಪ್ರೇರಣೆ ಪಡೆದು ಸುಭದ್ರ ಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕೆಂದು ತಿಳಿಸಿದರು.

ಮುಖಂಡರಾದ ರವಿ ಚವ್ಹಾಣ, ಗೌಸ ಬೀಡಿವಾಲೆ, ಬಾಳು ರಾಠೋಡ, ಟಿಪ್ಪು ಕನ್ನೂರ, ಮಹಿಬೂಬ ಸಾಲೋಟಗಿ, ಅಕ್ಷಯ ದುದನಿಗಿ, ಬಂದೆನವಾಜ ಕರಜಗಿ, ಮುಷಾಕ ಕರಜಗಿ, ಶರಣ ಬಸು ಕೋನಳ್ಳಿ, ಬವಾಸಾಬ ಹತ್ತರಕಿಹಾಳ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net