ಶರಣ ಸಾಹಿತ್ಯ ರಕ್ಷಿಸಿದ ಮಹಾನ್ ಸಂತ

The great saint who saved Sharan literature
ರಬಕವಿ ಬನಹಟ್ಟಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಶಿರಸ್ತೇದಾರ್ ಆರ್.ಎಸ್. ಸಾತಿಹಾಳ ಪೂಜೆ ಸಲ್ಲಿಸಿದರು. ಪ್ರಕಾಶ ಮಠಪತಿ, ಸದಾಶಿವ ಕುಂಬಾರ, ಚನ್ನಬಸಯ್ಯ ಮಠಪತಿ, ಮಡಿವಾಳಪ್ಪ ಮಡಿವಾಳರ, ಈರಪ್ಪ ಮಡಿವಾಳರ, ಪರಮಾನಂದ ಪರೀಟ ಮತ್ತಿತರರಿದ್ದಾರೆ.
Published on

ರಬಕವಿ/ಬನಹಟ್ಟಿ: ಹನ್ನೆರಡನೇ ಶತಮಾನದಲ್ಲಿ ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ ಮಡಿವಾಳ ಮಾಚಿದೇವರು ಬಿಜ್ಜಳ ಸೈನಿಕರ ವಿರುದ್ಧ ಹೋರಾಡಿ ಶರಣ ಸಾಹಿತ್ಯವನ್ನು ರಕ್ಷಣೆ ಮಾಡಿದ್ದಾರೆ ಎಂದು ರಬಕವಿ-ಬನಹಟ್ಟಿ ಶಿರಸ್ತೇದಾರ್ ಆರ್.ಎಸ್. ಸಾತಿಹಾಳ ತಿಳಿಸಿದರು.

ತಹಸೀಲ್ದಾರ್ ಕಾರ್ಯಾಲಯದಲ್ಲಿ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಮಾಚಿದೇವರ ವಚನಗಳು ಸರಳ ಶೈಲಿ ಮತ್ತು ಪ್ರೌಢ ಶೈಲಿಗಳಲ್ಲಿ ಇದ್ದು, ಸಾಮಾಜಿಕ ಸಮಸ್ಯೆ, ವೈಚಾರಿಕ ನಿಯಮಗಳನ್ನು ಎತ್ತಿ ತೋರುಸುತ್ತವೆ. ಅವರ ತತ್ವ, ಸಿದ್ಧಾಂತಗಳನ್ನು ಅಳವಡಿಕೊಳ್ಳಬೇಕು ಎಂದು ಶಿರಸ್ತೇದಾರ್ ಆರ್.ಎಸ್. ಸಾತಿಹಾಳ ತಿಳಿಸಿದರು.

ಪ್ರಕಾಶ ಮಠಪತಿ, ಸದಾಶಿವ ಕುಂಬಾರ, ಚನ್ನಬಸಯ್ಯ ಮಠಪತಿ, ಮಡಿವಾಳಪ್ಪ ಮಡಿವಾಳರ, ಈರಪ್ಪ ಮಡಿವಾಳರ, ಪರಮಾನಂದ ಪರೀಟ, ಅನೀಲಕುಮಾರ ಮಡಿವಾಳರ, ಸುಂದರ ಪರೀಟ, ಪ್ರಭು ಮಡಿವಾಳರ, ಶಿವಾನಂದ ಮಮದಾಪೂರ, ಸಂಜು ಮಡಿವಾಳರ, ಶೇಖರ ಪರೀಟ, ಅಶೋಕ ಮಡಿವಾಳರ, ಗಣಪತಿ ಪರೀಟ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net